ಮುಂಬಯಿ : ಡೊಂಬಿವಿಲಿ ಪೂರ್ವದ ನಿವಾಸಿ ಶಂಭು ಅಮೀನ್ (೭೫.) ವೃದ್ಧಾಪ್ಯ ಸಹಜ ಅಸ್ವಸ್ಥತೆಯಿಂದ ಕಳೆದ ಬುಧವಾರ (ಡಿ.೧೫) ತನ್ನ ಸ್ವನಿವಾಸದಲ್ಲಿ ನಿಧನರಾದರು. ಮೂಲತಃ ಉಡುಪಿ ಜಿಲ್ಲೆಯ ಕೋಡಿ ಬೇಂಗ್ರೆ ಮೂಲತಃ ಮೃತರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.
ಘಾಟ್ಕೋಪರ್ ಪಂತ್‌ನಗರ್ ಇಲ್ಲಿನ ಸಹಕಾರ ಮಾರ್ಕೇಟ್‌ನಲ್ಲಿ ಜನರಲ್ ಸ್ಟೋರ್ ಹೊಂದಿದ್ದು ತೆರೆಯ ಮರೆಯಲ್ಲೇ ಸಮಾಜ ಸೇವಕರಾಗಿ ಶ್ರಮಿಸಿದ್ದರು.
