ಮುಂಬಯಿ : ನವದೆಹಲಿ ಅಲ್ಲಿನ ಜಾಗತಿಕ ಪರ್ಯವರಣ ಪರಿಷತ್ತ್ ಸಂಸ್ಥೆಯು ಸಾಂತಕ್ರೂಜ್ ಪೂರ್ವದ ಕಲೀನಾ ನಿವಾಸಿ ಕೆ.ಎಂ ಸುವರ್ಣ ಇವರಿಗೆ ರಾಷ್ಟ್ರೀಯ  ಪ್ರಶಸ್ತಿ ಪ್ರದಾನಿಸಿ ಗೌರವಿಸಿತು.K M Suvarna Award

ಕಳೆದ ಬುಧವಾರ (ಡಿ.೧೫) ನವದೆಹಲಿಯಲ್ಲಿನ ಕಾನ್‌ಸ್ಟಿಟ್ಯೂಶನ್ ಕ್ಲಬ್ ಹೌಸ್‌ನಲ್ಲಿ ಜರುಗಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸಚಿವ ಕೇಂದ್ರೀಯ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವ ಶ್ರೀ ರಾಮದಾಸ್ ಅಠವಳೆ, ಮಾಜಿ ಎಂಎಲ್‌ಸಿ ಪಾಶ ಪಾಟೇಲ್ ಲಾತೂರು ಮತ್ತಿತರ ಗಣ್ಯರು ಅತಿಥಿ ಅಭ್ಯಾಗತರಾಗಿದ್ದು ಕೆ.ಎಂ ಸುವರ್ಣ ಇವರಿಗೆ ಪ್ರಶಸ್ತಿ ಫಲಕ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಪರ್ಯವರಣ ಪರಿಷತ್ತ್ನ ಅಧ್ಯಕ್ಷ ವಿಜಯರಾಜೇ ಧಮಾಲ್ ವೇದಿಕೆಯಲ್ಲಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭದ ಆದಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೂ ಪಾಲ್ಗೊಂಡಿದ್ದರು.

ಉಡುಪಿ ಜಿಲ್ಲೆಯ ಪಲಿಮಾರು ಎಣ್ಣೆತಟ್ಟು ನಿವಾಸಿ ಕಳೆದ ಸುಮಾರು ನಾಲ್ಕು ದಶಕಗಳಿಂದ ವಿದ್ಯಾನಗರಿ ಕಲೀನಾ ಕ್ಯಾಂಪಸ್‌ನಲ್ಲಿ ಕ್ಯಾಂಟೀನ್ ನಡೆಸುತ್ತಾ ಸ್ಥಾನೀಯ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿ ಕೊಂಡಿರುವ ಸುವರ್ಣ ತೆರೆಯ ಮರೆಯಲ್ಲಿದ್ದೇ ಸಮಾಜ ಸೇವಕರಾಗಿದ್ದು ಶ್ರಮಿಸುತ್ತಿರುವ ಸರಳ ಸಜ್ಜನಿಕಾ ವ್ಯಕ್ತಿಯಾಗಿದ್ದಾರೆ.

By Suddi9

Leave a Reply

Your email address will not be published. Required fields are marked *