ಕೈಕಂಬ : ಪರಾರಿಯಲ್ಲಿ ಅತ್ಯಾಚಾರ ನಡೆಸಿ ಕೊಲೆಗೈಯಲಾದ ೮ ವರ್ಷದ ಮಗುವಿನ ಆತ್ಮಕ್ಕೆ ಚಿರಶಾಂತಿ ಕೋರಿ ಗುರುವಾರ ಸಂಜೆ ಗುರುಪುರ ಜಂಕ್ಷನ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಮಾತೃಶಕ್ತಿ ದುರ್ಗಾವಾಹಿನಿ ಪ್ರಖಂಡ ಗುರುಪುರ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಈ ಊರಿನಲ್ಲಿ ನಡೆದ ಅತ್ಯಂತ ದುಃಖದ ಕೃತ್ಯ ಇದಾಗಿದೆ. ಬಂಧಿತರ ವಿರುದ್ಧ ಬಲವಾದ ಸಾಕ್ಷಾö್ಯಧಾರ ಸಂಗ್ರಹಿಸಿ, ವಿಳಂಬ ಮಾಡದೆ ಅಪರಾಧಿಗಳಿಗೆ ಕಠಿಣಾತಿಕಠಿಣ ಶಿಕ್ಷೆ ವಿಧಿಸಬೇಕು. ಈ ಮೂಲಕ ಬೇರೆಲ್ಲೂ ಇಂತಹ ಹೀನ ಮತ್ತು ನೀಚ ಕೃತ ಪುನರಾವರ್ತನೆಯಾಗಬಾರದು ಎಂದರು.
ಸಭೆಯ ಆರಂಭದಲ್ಲಿ ಮೃತ ಬಾಲಕಿ ಭಾವಚಿತ್ರದೆದುರು ಹಣತೆ ದೀಪ ಹಚ್ಚಿ ಒಂದು ನಿಮಿಷದ ಮೌನ ಪ್ರಾರ್ಥನೆ ನಡೆಸಲಾಯಿತು. ಸಭೆಯಲ್ಲಿ ಹಿಂದೂ ಪ್ರತಿಷ್ಠಾನದ ಸದಸ್ಯ ಜಯರಾಮ ಕೊಟ್ಟಾರಿ, ಜಿಲ್ಲಾ ಸಹ ಕಾರ್ಯದರ್ಶಿ ವಸಂತ್ ಸುವರ್ಣ, ಜಿಲ್ಲಾ ಸಹ ಪ್ರಮುಖ ಸುಜಾತಾ, ವಿಹಿಂಪ ಗುರುಪುರ ಪ್ರಖಂಡ ಅಧ್ಯಕ್ಷ ವಿಷ್ಣು ಕಾಮತ್, ಪ್ರಖಂಡ ಕಾರ್ಯದರ್ಶಿ ಸುನಿಲ್, ಸಹ ಕಾರ್ಯದರ್ಶಿ ದಿನೇಶ್ ಮಿಜಾರ್, ಸಂಚಾಲಕ ರಾಜೀವ ಗಂಜಿಮಠ, ಮಾತೃಶಕ್ತಿ ಪ್ರಮುಖ್ ವಿಜಯರಾಜ್, ಸತ್ಸಂಗ ಪ್ರಮುಖ್ ಶಶಿಕಲಾ, ವಿವಿಧ ಸಂಘಟನೆಗಳ ಪ್ರಮುಖರು, ರಾಜೇಶ್ ಸುವರ್ಣ, ಹರೀಶ್ ಬಳ್ಳಿ, ನಳಿನಿ ಶೆಟ್ಟಿ, ಜಲಜಾ ಹಾಗೂ ಊರಿನ ಗಣ್ಯ ನಾಗರಿಕರು ಉಪಸ್ಥಿತರಿದ್ದರು.
