ಕೈಕಂಬ: ಹಿರಿಯ ಕಾಂಗ್ರೆಸಿಗ, ಸಹಕಾರಿ ಮುಖಂಡರಾಗಿದ್ದ ಗಂಜಿಮಠ ನಾರಾಯಣ ಪೂಜಾರಿ(೮೧) ಅವರು ಮಂಗಳವಾರ ವಯೋಸಹಜ ಅಸೌಖ್ಯದಿಂದ ನಿಧನ ಹೊಂದಿದರು.gur-nov-24-narayana poojary (1)

ಮೃತರು ಪತ್ನಿ, ಜಿಲ್ಲಾ ಕಾಂಗ್ರೆಸ್ಸಿನ ವಕ್ತಾರ ಗಣೇಶ್ ಪೂಜಾರಿ ಗಂಜಿಮಠ ಸಹಿತ ನಾಲ್ವರು ಪುತ್ರು ಹಾಗೂ ಇಬ್ಬರು ಅವಳಿ ಪುತ್ರಿಯರನ್ನು ಅಗಲಿದ್ದಾರೆ.

೧೮ ವರ್ಷ ಗಂಜಿಮಠ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದ ಇವರು, ಸುಮಾರು ೩೦ ವರ್ಷ ಗ್ರಾಹಕರ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರು. ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿದ್ದ ಪೂಜಾರಿಯವರು ಮೂರ್ತೆದಾರರ ಹೋರಾಟ ಸಮಿತಿ ಉಪಾಧ್ಯಕ್ಷರಾಗಿದ್ದುಕೊಂಡು ಮೂರ್ತೆದಾರರ ಸಹಕಾರ ಸಂಘ ಮತ್ತು ಬ್ಯಾಂಕ್ ಸ್ಥಾಪಿಸುವಲ್ಲಿ ಅವಿರತ ಹೋರಾಟ ನಡೆಸಿದ್ದರು. ಮೂರ್ತೆದಾರರ ಮಹಾ ಮಂಡಲದ ಅಧ್ಯಕ್ಷರಾಗಿದ್ದರು.

ಕಾಂಗ್ರೆಸ್ಸಿನ ಕೆಲವು ಮಾಜಿ ಸೀಎಂಗಳೊಂದಿಗೆ ನಿಕಟವರ್ತಿಯಾಗಿದ್ದ ಇವರ ನಿಧನಕ್ಕೆ ಮಾಜಿ ಸಚಿವ ರಮಾನಾಥ ರೈ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಹಾಗೂ ಇತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *