ಕಟೀಲು: ಊರ ಪರವೂರ ಗುರು ಹಿರಿಯರ ಮತ್ತು ಗ್ರಾಮಸ್ಥರ ಕೂಡುವಿಕೆಯಿಂದ ಕೊಡೆತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನಕ್ಕೆ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ನೆಟ್ಟಣದಿಂದ ತಂದಂತಹ ನೂತನ ಧ್ವಜಸ್ತಂಭ (ಬಂಟಕೇಪುಲಮರ) ದ ಮೆರವಣಿಗೆಯು ಕಿನ್ನಿಗೋಳಿಯ ರಾಜಾಂಗಣದಿಂದ ಶ್ರೀ ಕ್ಷೇತ್ರ ಕಟೀಲಿಗೆ ಬಂದು ಕಟೀಲಮ್ಮನ ಅನುಗ್ರಹ ಪ್ರಸಾದದೊಂದಿಗೆ ಕೊಡೆತ್ತೂರು ಶ್ರೀ ಅರಸು ಕುಂಜಿರಾಯ ಸನ್ನಿಧಿಗೆ ವೈಭವದ ಮೆರವಣಿಗೆಯೊಂದಿಗೆ ಸಾಗಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿಯವರು ಸದಸ್ಯರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಡೋಲು, ವಾದ್ಯ ಬ್ಯಾಂಡ್, ಕುಣಿತ ಭಜನೆ ಮೆರವಣಿಗೆಗೆ ಮೆರಗು ನೀಡಿದವು ಕಟೀಲಿನಲ್ಲಿ ಸದಾನಂದ ಆಸ್ರಣ್ಣ ಧ್ಬಜದಸ್ತಂಭದ ಮರಕ್ಕೆ ಪೂಜೆ ನೇರವೇರಿಸಿದರು. ಈ ಸಂದರ್ಭ ಕೊಡೆತ್ತೂರು ಅರಸುಕುಂಜರಾಯ ದೈವಸ್ಥಾನದ ಜಯರಾಮ ಮುಕಾಲ್ದಿ, ಅತ್ತೂರು ಅರಸುಕುಂಜಿರಾಯ ದೈವಸ್ಥಾನದ ಶಂಭು ಮುಕಾಲ್ದಿ, ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ನಾಗರಾಜ ಶೆಟ್ಟಿ, ವೇದವ್ಯಾಸ ಉಡುಪ ದೇವಸ್ಯ ಮಠ. ಕೊಡೆತ್ತೂರುಗುತ್ತು ಗುತ್ತಿನಾರ್ ಸಂಜೀವ ಶೆಟ್ಟಿ , ಆಡಳಿತ ಮಂಡಳಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
