ಉಳ್ಳಾಲ: ಸಮಾಜದ ಅಭಿವೃದ್ಧಿಗೆ ಸಂಬಂಧಪಟ್ಟ ಯಾವುದೇ ಯೋಜನೆ ಯಶಸ್ವಿಯಾಗಲು ಒಬ್ಬರ ಕೈ ಬಲ ಸಾಕಾಗೋದಿಲ್ಲ, ಹತ್ತು ಕೈಗಳ ಒಂದುಗೂಡುವಿಕೆ ಅಗತ್ಯ. ತೀಯಾ ಸಮಾಜ ಬಾಂಧವರು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಮುಂದುವರಿಯುತ್ತಿದ್ದು ಸಮಾಜದಲ್ಲಿರುವ ಸಾಹಿತಿಗಳು, ಲೇಖಕರನ್ನು ಗುರುತಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.WhatsApp Image 2021-11-08 at 3.36.04 PM

ತೊಕ್ಕೊಟ್ಟು ಪ್ರಧಾನ ಕಚೇರಿ ಹೊಂದಿರುವ ತೀಯಾ ಸೇವಾ ಸಹಕಾರ ಸಂಘ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ಭಾಗ್ಯ ಕಾಂಪ್ಲೆಕ್ಸ್ ನಲ್ಲಿ ಆರಂಭಿಸಿದ ಪ್ರಥಮ‌ ಶಾಖಾ ಉದ್ಘಾಟನೆ ಸಮಾರಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ತೀಯಾ ಸಮಾಜದ ಡಾ. ಅರುಣ್ ಉಳ್ಳಾಲ್ ಅವರನ್ನು ಶುಕ್ರವಾರ ಅಭಿನಂದಿಸಿ ಅವರು ಮಾತನಾಡಿದರು.

ಸಂಘದ ಅಧ್ಯಕ್ಷ ಎಂ. ದಿನೇಶ್ ಕುಂಪಲ ಅಧ್ಯಕ್ಷತೆ ವಹಿಸಿ ಮಾತನಾಡಿ ತೀಯಾ ಸೇವಾ ಸಮಾಜ ಬಾಂಧವರು ಆರ್ಥಿಕವಾಗಿ ಹಾಗೂ ಇತರ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿರುವುದನ್ನು ಮನಗಂಡು, ಏಳು ವರ್ಷಗಳ ಹಿಂದೆ ಸ್ವಸಹಾಯ ಸಂಘ, ಬಳಿಕ ಚಾರಿಟೇಬಲ್ ಟ್ರಸ್ಟ್ ರಚಿಸಿ ಈಗ ಸಹಕಾರ ಸಂಘ ಸ್ಥಾಪಿಸಲಾಗಿದ್ದು ಈಗಾಗಲೇ ೭೮ ಸ್ವಸಹಾಯ ಸಂಘ ರಚನೆಯಾಗಿದ್ದು ಸಹಕಾರ ಸಂಘದ ಮೂಲಕ ಸಮಾಜ ಹಾಗೂ ಇತರ ಸಮುದಾಯದ ಸಾಧಕರನ್ನು ಗುರುತಿಸುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ. ರಾಜಾರಾಮ ಭಟ್ ಭದ್ರತಾ ಕೊಠಡಿ ಉದ್ಘಾಟಿಸಿದರು. ರಾಜ್ಯ ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಶ್ರೀ ಚೀರುಂಭ ಭಗವತೀ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್, ಭಗವತೀ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ದೇವದಾಸ್ ಕೊಲ್ಯ, ತೀಯಾ ಸ್ವಸಹಾಯ ಸಂಘದ ಸಂಚಾಲಕಿ ಇಂದುಮತಿ ದಾಮೋದರ ಉಳ್ಳಾಲ್, ಏಕಲವ್ಯ ಪ್ರಶಸ್ತಿ ಪುರಸ್ಕೃತ ಭಾಸ್ಕರ ತೊಕ್ಕೊಟ್ಟು, ಸಂಘದ ಉಪಾಧ್ಯಕ್ಷ ಸುನಿಲ್ ಜೆ. ಉಚ್ಚಿಲ್ , ಉದ್ಯಮಿ ಟಿ.ಎಸ್. ಖಾದರ್ ತಲಪಾಡಿ, ನಿರ್ದೇಶಕರುಗಳಾದ ಪ್ರಕಾಶ್ ಎಂ. ಉಳ್ಳಾಲ, ನಾಗಪ್ಪ ಬಿ. ಅಡ್ಯಾರ್, ಸೂರಜ್, ಮನೋಜ್, ಅಭಿಷೇಕ್ ಬೆಳ್ಚಾಡ, ಉಮೇಶ್, ರಜನಿ ಕುಮಾರಿ, ಲತಾ ವಿ. ಹಾಗೂ ಹರಿಣಾಕ್ಷಿ ಉಪಸ್ಥಿತರಿದ್ದರು.

ಪ್ರಧಾನ ವ್ಯವಸ್ಥಾಪಕಿ ಯಶವಂತಿ ಜೆ. ಉಚ್ಚಿಲ್ ವಂದಿಸಿದರು. ಶಾಖಾ ವ್ಯವಸ್ಥಾಪಕ ಸ್ವಸ್ತಿಕ್ ಹಾಗೂ ಉಷಾ ಕುಂಪಲ ಸಹಕರಿಸಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *