ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ದೀಪಾವಳಿ ಪ್ರಯುಕ್ತ ಟೈರ‍್ಸ್ ಫ್ರೆಂಡ್ಸ್ ಹಾಗೂ “ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು” ಹಣತೆ ದೀಪದ ಬೆಳಕಿನ ಹಬ್ಬದ ಎರಡನೇ ದಿನದಂದು ಪೊಳಲಿ ದೇವಳದ ಅರ್ಚಕ ಅನಂತ ಭಟ್ ದೀಪ ಬೆಳಗಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಕೆ.ಜನಾರ್ಧನ ಶೆಟ್ಟಿ ಪುಂಚಮೆ, ವೆಂಕಟೇಶ್ ನಾವಡ ಪೊಳಲಿ ಮುಂತಾದವರು ಉಪಸ್ಥಿತರಿದ್ದರು. ತೆಂಕಎಡಪದವು ಶ್ರೀ ರಾಮ ಮಕ್ಕಳ ಕುಣಿತ ಭಜನಾ ಮಂಡಳಿ ವತಿಯಿಂದ ನ.೪ರಂದು ಗುರುವಾರ ಕುಣಿತ ಭಜನೆ ನಡೆಯಿತು.

