ಮೂಡುಬಿದಿರೆ: ಸೋಮವಾರ ಸಾಯಂಕಾಲ ಭಾರೀ ಗುಡುಗು ಸಿಡಿಲು ಸಹಿತ ಸುರಿದ ಭರ್ಜರಿ ಮಳೆ ಸಂದರ್ಭದಲ್ಲಿ ಸಿಡಿಲಾಘಾತಕ್ಕೆ ಸಿಲುಕಿ ಇಬ್ಬರು ಮೃತಪಟ್ಟ ದಾರುಣ ಘಟನೆ ಪುತ್ತಿಗೆ ಪಂಚಾಯಿತಿ ವ್ಯಾಪ್ತಿಯ ಕಂಚಿಬೈಲು ಎಂಬಲ್ಲಿ ನಡೆದಿದೆ.
ಅರ್ಬಿ ಪರಿಸರದಲ್ಲಿ ಶೆಡ್ ಒಂದರಲ್ಲಿದ್ದ ಸ್ಥಳೀಯ ಕಾರ್ಮಿಕರಾದ ಯಶವಂತ್ (25) ಮಣಿಪ್ರಸಾದ್ (25) ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ಪರಿಸರದಲ್ಲಿನ ಗಣೇಶ್, ಸಂದೀಪ್ ಮತ್ತು ಪ್ರವೀಣ್ ಹೀಗೆ ಮೂವರು ಸಿಡಿಲು ಆಘಾತಕ್ಕೆ ಸಿಲುಕಿದ್ದು ಕೂಡಲೇ ಅವರನ್ನು ಆಲಂಗಾರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮೂಡುಬಿದಿರೆ ಸಹಿತ ಗ್ರಾಮಾಂತರ ಪರಿಸರದಲ್ಲಿ ಸೋಮವಾರ ಸಾಯಂಕಾಲ ಭಾರೀ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು ಕೆಲ ಕಾಲ ಆತಂಕಕ್ಕೆ ಕಾರಣವಾಯಿತು.
