ಕಲ್ಲಡ್ಕ: “ಕಳೆದ ಒಂದಷ್ಟು ಸಮಯದಿಂದ ಶಾಲಾ ವಾತಾವರಣದಿಂದ ಹೊರಗಿದ್ದರೂ, ಶೈಕ್ಷಣಿಕ ಚಟುವಟಿಕೆ ಮಾತ್ರ ಮನೆಯಲ್ಲಿ ನಿರಂತರವಾಗಿತ್ತು. ಶಾಲೆಯಲ್ಲಿ ನಡೆಯುತ್ತಿದ್ದಂತಹ ಸಂಸ್ಕಾರಯುತ ಕಾರ್ಯಗಳು ಪ್ರತಿ ಮನೆಯಲ್ಲಿಯೂ ಕೂಡ ನಡೆದಿರುವುದು ನಿಜವಾಗಿಯೂ ಶ್ಲಾಘನೀಯ. ಆದರೆ ಅನುಭವದ ಶಿಕ್ಷಣವನ್ನು, ಶಾಲೆಯ ಮೂಲಕವೇ ಪಡೆಯಲು ಮತ್ತೊಮ್ಮೆ ಅವಕಾಶ ಸಿಕ್ಕಿರುವುದು ಎಲ್ಲರಿಗೂ ಸಂತಸದ ವಿಚಾರ. ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯು ಕನ್ನಡ ಮಾಧ್ಯಮದಲ್ಲಿ ರಾಜ್ಯದಲ್ಲಿಯೇ ಗರಿಷ್ಠ ಸಂಖ್ಯೆಯನ್ನು (೧೨೨೫) ಹೊಂದಿದ್ದು ಮಾತೃಭಾಷೆಯಲ್ಲಿ ಉಚಿತ ಶಿಕ್ಷಣ ನೀಡುತ್ತಿರುವ ಹೆಗ್ಗಳಿಕೆ ಈ ಸಂಸ್ಥೆಗಿದೆ.
ಮುಂದಿನ ದಿನಗಳಲ್ಲಿ ಪರಿಸರದೊಂದಿಗಿನ ಶಿಕ್ಷಣವನ್ನು ನಮ್ಮಲ್ಲಿಅತ್ಯಂತ ಸಂತೋಷದಾಯಕವಾಗಿ ಪ್ರಾಣಿ, ಪಕ್ಷಿ,ಗೋವು, ಮರ-ಗಿಡಗಳೊಂದಿಗೆ ಬೆರೆತು ಕಲಿಯುವ ಅವಕಾಶ ಪೋಷಕರ ಸಹಭಾಗಿತ್ವದೊಂದಿಗೆ ನಿಮ್ಮದಾಗಲಿದೆ. “ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರಾದಡಾ| ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.

ವಿದ್ಯಾರ್ಥಿಗಳು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ಕಲ್ಲಡ್ಕ ಭಾರತಮಾತೆಗೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿದರು. ನಂತರ ದಿನನಿತ್ಯದ ಪ್ರಾರ್ಥನೆಯಾದ ಸರಸ್ವತಿ ವಂದನೆ ಅಗ್ನಿಹೋತ್ರದೊಂದಿಗೆ ನಡೆಯಿತು.
ಅಧ್ಯಾಪಕ ವೃಂದದವರು ಬಂದಿರುವಂತಹ ಒಂದನೇತರಗತಿಯ ಪುಟಾಣಿಗಳಿಗೆ ಆರತಿ,ಅಕ್ಷತೆ,ತಿಲಕಧಾರಣೆ ಮಾಡಿ, ಸಿಹಿ ನೀಡಿ ವಿಶಿಷ್ಟವಾಗಿ ಸ್ವಾಗತಿಸಿದರು. ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತಮಾಧವ, ರಾಷ್ಟ್ರ ಸೇವಿಕಾ ಸಮಿತಿಯಕಾರ್ಯಕಾರಿಣಿ ಸದಸ್ಯರಾದ ಕಮಲಾ ಪ್ರಭಾಕರ ಭಟ್ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಹೇಮಲತಾ ನಿರ್ವಹಿಸಿದರು.
