ಮಂಗಳೂರು: `ಜಯಕಿರಣ’ ಫಿಲ್ಸ್ಮ್ ಲಾಂಛನದಡಿಯಲ್ಲಿ ತಯಾರಾದ ಚೊಚ್ಚಲ ತುಳು ಚಿತ್ರ `ಚಾಲಿಪೋಲಿಲು’ ಪ್ರೀಮಿಯರ್ ಶೋ ಬುಧವಾರ ಸಂಜೆ ನಗರದ ಸಿಟಿ ಸೆಂಟರ್ ಮಾಲ್ನಲ್ಲಿರುವ ಸಿನಿಪೊಲಿಸ್ ಸಿನಿಮಾ ಮಂದಿರದಲ್ಲಿ ಪ್ರದರ್ಶನಗೊಂಡಿತು. ಸಿನಿಮಾ ವೀಕ್ಷಣೆಗೆ ಪತ್ರಕರ್ತರು ಹಾಗೂ ಗಣ್ಯರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಿನಿಮಾ ವೀಕ್ಷಿಸಿದ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಪ್ರಮುಖರಾದ ಉಮಾನಾಥ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅವರು ಸಿನಿಮಾ ತಂಡಕ್ಕೆ ಪ್ರಶಂಸೆಯ ಸುರಿಮಳೆಗೈದರು.
ಚಿತ್ರ ನಿಮರ್ಾಪಕ ಪ್ರಕಾಶ್ ಪಾಂಡೇಶ್ವರ, ನಿದರ್ೇಶಕ ವೀರೇಂದ್ರ ಶೆಟ್ಟಿ ಕಾವೂರು, ಕಾರ್ಯಕಾರಿ ನಿಮರ್ಾಪಕ ಜಗನ್ನಾಥ ಶೆಟ್ಟಿ ಬಾಳ, ಚಿತ್ರನಟರಾದ ದೇವದಾಸ್ ಕಾಪಿಕಾಡ್, ನವೀನ್ ಡಿ.ಪಡೀಲ್, ಭೋಜರಾಜ ವಾಮಂಜೂರು, ಮಧು ಸುರತ್ಕಲ್, ನಟಿ `ಭಾರತಿ’ ಧಾರವಾಹಿ ಖ್ಯಾತಿಯ ದಿವ್ಯಶ್ರೀ ಹಾಗೂ ಇತರ ಕಲಾವಿದರು ಈ ಸಂದರ್ಭ ಉಪಸ್ಥಿತರಿದ್ದರು.

`ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ’
-ಪ್ರಕಾಶ್ ಪಾಂಡೇಶ್ವರ
`ತುಳು ಭಾಷೆಯಲ್ಲಿ ಒಳ್ಳೆಯ ಚಿತ್ರವನ್ನು ನೀಡಬೇಕು ಎಂದು ಹಗಲಿರುಳು ಶ್ರಮಿಸಿದ್ದಕ್ಕೆ ಪ್ರತಿಫಲ ಸಿಕ್ಕಿದೆ. ಚಿತ್ರವನ್ನು ನೋಡಿದವರು ಕೊಟ್ಟಿರುವ ಅಭಿಮಾನದ ಮಾತುಗಳು ಖುಷಿ ನೀಡಿವೆ. ಶುಕ್ರವಾರ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಚಿತ್ರ ಬಿಡುಗಡೆ ಕಾಣಲಿದ್ದು ತುಳುವರ ಪ್ರೋತ್ಸಾಹ ಉತ್ತಮ, ಸಾಮಾಜಿಕ ಕಳಕಳಿಯ ಚಿತ್ರಕ್ಕೆ ಸಿಗುತ್ತದೆ ಎಂಬ ಭರವಸೆ ನಮಗಿದೆ’
`ಸದಭಿರುಚಿಯ ಚಿತ್ರ, ಮನೆಮಂದಿ ಕುಳಿತು ನೋಡುವಂಥದ್ದು’
-ಉಮಾನಾಥ ಕೋಟ್ಯಾನ್
`ಚಾಲಿಪೋಲಿಲು ಚಿತ್ರ ತುಳು ಚಿತ್ರರಂಗದ ದಿಕ್ಕನ್ನೇ ಬದಲಾಯಿಸುತ್ತದೆ. ಯಾಕೆಂದರೆ ಇಂಥ ಚಿತ್ರ ಈ ಹಿಂದೆ ತುಳುವಲ್ಲಿ ಬಂದಿಲ್ಲ. ಸದಭಿರುಚಿಯ ಚಿತ್ರವಾಗಿದ್ದು, ಮನೆಮಂದಿ ಎಲ್ಲರೂ ಚಿತ್ರ ನೋಡುತ್ತಾ ಎಂಜಾಯ್ ಮಾಡಬಹುದು. ಚಿತ್ರದ ನಿದರ್ೇಶಕ ವೀರೇಂದ್ರ ಶೆಟ್ಟಿಯವರು ಈ ಚಿತ್ರಕ್ಕಾಗಿ ತುಂಬಾ ಶ್ರಮಿಸಿದ್ದಾರೆ. ಅವರ ಶ್ರಮದಿಂದ ಒಂದೊಳ್ಳೆ ಚಿತ್ರವನ್ನು ನೋಡುವ ಅವಕಾಶ ನಮಗೆ ಬಂದಿದೆ. ಎಲ್ಲರೂ ಚಿತ್ರ ನೋಡಿ ಎಂಜಾಯ್ ಮಾಡಿ’

ದಕ್ಷ ನಿರ್ದೇಶನ, ಸುಂದರ ಛಾಯಾಗ್ರಹಣ ಪ್ಲಸ್ ಪಾಯಿಂಟ್:
`ಚಾಲಿಪೋಲಿಲು’ ಸಿನಿಮಾ ತುಳು ಭಾಷೆಯಲ್ಲಿ ತೆರೆಕಂಡ ಇತರೇ ಚಿತ್ರಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಇದಕ್ಕೆ ಕಾರಣ ನವನಿದರ್ೇಶಕ ವೀರೇಂದ್ರ ಶೆಟ್ಟಿ ಕಾವೂರು ಅವರ ತಂತ್ರಗಾರಿಕೆ. ನಿದರ್ೇಶನ ಕ್ಷೇತ್ರಕ್ಕೆ ಹೊಸಬರಾದರೂ ಎಲ್ಲೂ ರಾಜಿ ಮಾಡಿಕೊಳ್ಳದೆ ದುಡಿದಿರುವ ಇವರ ಸಾಮಥ್ರ್ಯದಿಂದಾಗಿ ಸಿನಿಮಾ ಎಂಥವರಿಗೂ ಇಷ್ಟವಾಗುತ್ತದೆ. ಹಲವಾರು ಮಳಯಾಳಂ ಸಿನಿಮಾಗಳಲ್ಲಿ ಛಾಯಾಗ್ರಹಣ ಮಾಡಿರುವ ಉತ್ಪಲ್ ನಯನಾರ್ ಅವರು ಇಲ್ಲೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ಇದರಿಂದಾಗಿ ಸಿನಿಮಾದ ಪ್ರತೀ ದೃಶ್ಯಗಳು ಸುಂದರವಾಗಿ ಮೂಡಿಬಂದಿದ್ದು, ಎಲ್ಲೂ ಬೋರ್ ಹೊಡೆಸಲು ಬಿಡುವುದಿಲ್ಲ.
ಇನ್ನು ಸಿನಿಮಾದ ಹಾಡುಗಳು ಸುಶ್ರಾವ್ಯ ಕಂಠದಿಂದ ಈಗಾಗಲೇ ಜನಮನ ಗೆದ್ದಿದ್ದು, ಹಾಡಿನ ದೃಶ್ಯವಂತೂ ಸೊಗಸಾಗಿ ಮೂಡಿಬಂದಿದೆ. ಚಿತ್ರದ ನಟಿ ದಿವ್ಯಶ್ರೀ ಅವರು ಪಕ್ಕದ ಮನೆಯ ಹುಡುಗಿಯಂತೆ ತೀರಾ ಸಹಜವಾಗಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಟರಾದ ಭೋಜರಾಜ್ ವಾಮಂಜೂರು, ದೇವದಾಸ್ ಕಾಪಿಕಾಡ್, ನವೀನ್ ಡಿ.ಪಡೀಲ್, ಅರವಿಂದ್ ಬೋಳಾರ್, ಪಾಂಡುರಂಗ ಅಡ್ಯಾರ್, ಸುಂದರ್ ರೈ ಮಂದಾರ, ಅಜರ್ುನ್ ಕಾಪಿಕಾಡ್, ವಿದ್ಯಾಶ್ರೀ, ಪದ್ಮಜಾ ರಾವ್… ಹೀಗೆ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇನ್ನು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಹುತೇಕ ತುಳು ರಂಗಭೂಮಿಯ ಕಲಾವಿದರು, ಪತ್ರಕರ್ತರು ಸಿನಿಮಾದಲ್ಲಿ ನಟಿಸಿದ್ದು ಜನರಿಗೆ ಪಕ್ಕಾ ಮನೋರಂಜನೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಚಾಲಿಪೋಲಿಲು ಚಿತ್ರವನ್ನು ಯಾವ ಕೋನದಿಂದ ನೋಡಿದರೂ ಇಲ್ಲಿಯವರೆಗೆ ಬಂದಿರುವ ತುಳು ಚಿತ್ರಗಳಿಂದ ಡಿಫರೆಂಟ್ ಆಗಿದೆ. ಚಿತ್ರದಲ್ಲಿ ದ್ವಂದ್ವಾರ್ಥದ ಸಂಭಾಷಣೆಯಾಗಲೀ, ಅಶ್ಲೀಲ ಅನಿಸುವಂಥ ದೃಶ್ಯಾವಳಿಯಾಗಲೀ ಇಲ್ಲ. ಇದರಿಂದ ಚಿತ್ರವನ್ನು ಕುಟುಂಬ ಸಮೇತ ನೋಡಿ ಎಂಜಾಯ್ ಮಾಡಲು ಯಾವುದೇ ಅಡ್ಡಿಯಿಲ್ಲ. ಇನ್ನು ಸಿನಿಮಾದಲ್ಲಿ ನಟಿಸಿದ ಎಲ್ಲರೂ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಸ್ಯ, ಮನೋರಂಜನೆ, ಸ್ಟಂಟ್, ಸಾಮಾಜಿಕ ಸಂದೇಶ, ಗಟ್ಟಿಯಾದ ಕಥೆ ಹೊಂದಿರುವ ಕಾರಣ ಚಿತ್ರವನ್ನು ಜನರು ಮನಸಾರೆ ಸ್ವೀಕರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಅ.31ರ ಶುಕ್ರವಾರ ಬಿಡುಗಡೆ ಕಾಣಲಿರುವ ಚಿತ್ರವನ್ನು ನೀವೂ ಕುಟುಂಬ ಸಮೇತ ನೋಡಿ ಸಖತ್ ಎಂಜಾಯ್ ಮಾಡಿ.
-ಶಶಿಧರ ಬಂಗೇರ, ಬೆಳ್ಳಾಯರು





