ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಮೂಡುಬಿದಿರೆ ಘಟಕದ ಕಟ್ಟಡ ನಿರ್ಮಿಸಲು ಅನುದಾನ ನೀಡುವುದು ಹಾಗೂ ಅಲ್ಲಿಯವರೆಗೆ ತಾತ್ಕಾಲಿಕವಾಗಿ ಕೊಠಡಿಯನ್ನು ಒದಗಿಸುವಂತೆ ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ಗೃಹರಕ್ಷಕದಳದ ಕಮಾಂಡೆಂಟ್ ಡಾ.ಮುರಲೀ ಮೋಹನ್ ಚೂಂತಾರು ಮಂಗಳವಾರ ಸಲ್ಲಿಸಿದರು.WhatsApp Image 2021-09-30 at 10.09.19 AM

ತಹಸೀಲ್ದಾರ್ ಕಚೇರಿ ಹಿಂದುಗಡೆ ಖಾಲಿ ಇರುವ ಸರ್ಕಾರಿ ಕಟ್ಟಡದಲ್ಲಿ ಕೊಠಡಿ ನೀಡುವಂತೆ ಶಾಸಕರು ತಹಸೀಲ್ದಾರ್‌ಗೆ ಸೂಚಿಸಿದರು. ಕಟ್ಟಡ ನಿರ್ಮಾಣಕ್ಕೆ ಅನುದಾನಕ್ಕೆ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ಮುರಲೀ ಮೋಹನ್ ಚೂಂತಾರು, ಮೂಡುಬಿದಿರೆ ಘಟಕದಲ್ಲಿ 43 ಗೃಹರಕ್ಷಕರಿದ್ದು, ಅದರಲ್ಲಿ 10 ಮಂದಿ ಮಹಿಳಾ ಗೃಹರಕ್ಷಕರಿದ್ದಾರೆ. ಮಾರ್ಪಾಡಿ ಗ್ರಾಮದಲ್ಲಿ ಗೃಹರಕ್ಷಕ ದಳಕ್ಕೆ 10 ಸೆಂಟ್ಸ್ ಜಾಗ ಹಂಚಿಕೆಯಾಗಿದೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೊರತೆಯಿದೆ. ಕಟ್ಟಡ ನಿರ್ಮಾಣ ಆಗುವವರೆಗೆ ಗೃಹರಕ್ಷಕರಿಗೆ ತಾತ್ಕಾಲಿಕ ಕೊಠಡಿಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು. ತಹಸೀಲ್ದಾರ್ ಪುಟ್ಟರಾಜು, ಮೂಡುಬಿದಿರೆ ಘಟಕಾಧಿಕಾರಿ ಪಾಂಡಿರಾಜ್ ಹಾಗೂ ಗೃಹರಕ್ಷಕರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *