ಮುಂಬಯಿ : ಮೂಡುಬಿದಿರೆ ಸಮೀಪದ ಮಾರ್ನಾಡು ಪಣರಬೆಟ್ಟು ಮುಂಡ್ಲಿ ಆಯೆರಗುತ್ತು ನಿವಾಸಿ ಸರಸ್ವತಿ ಹೊನ್ನಪ್ಪ ಶೆಟ್ಟಿ (92.) ಸೆ.21 ರಂದು ಮಂಗಳವಾರ ಸಂಜೆ ತಮ್ಮ ಸ್ವಗೃಹದಲ್ಲಿ ವಯೋಸಹಜತೆ ಯಿಂದ ನಿಧನರಾದರು.
ಮೃತರು ತುಳುನಾಡಿನ ಸಂಪ್ರದಾಯಗಳ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದದು, ಆ ಜ್ಞಾನವನ್ನು ತನ್ನ ಮಕ್ಕಳಿಗೂ ಧಾರೆ ಎರೆದಿದ್ದರು. ತನ್ನ ಸನ್ನಡತೆಯ ಗುಣಗಳಿಂದಾಗಿ ತನ್ನೂರಿನಲ್ಲಿ ಎಲ್ಲಾ ಜನರ ಪ್ರೀತಿಗೆ ಪಾತ್ರರಾಗಿ ಜನಾನುರೆಣಿಸಿದ್ದರು.
ಮೃತರು ತುಳುನಾಡಿನ ಸಂಪ್ರದಾಯಗಳ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದದು, ಆ ಜ್ಞಾನವನ್ನು ತನ್ನ ಮಕ್ಕಳಿಗೂ ಧಾರೆ ಎರೆದಿದ್ದರು. ತನ್ನ ಸನ್ನಡತೆಯ ಗುಣಗಳಿಂದಾಗಿ ತನ್ನೂರಿನಲ್ಲಿ ಎಲ್ಲಾ ಜನರ ಪ್ರೀತಿಗೆ ಪಾತ್ರರಾಗಿ ಜನಾನುರೆಣಿಸಿದ್ದರು.ಮೃತರು ರಂಗನಟ ಪಾಲ್ಘಾರ್ ನಿವಾಸಿ ಪ್ರಕಾಶ ಶೆಟ್ಟಿ, ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಮೋಹನ ಮಾರ್ನಾಡ್, ಪ್ರಸಿದ್ದ ಯಕ್ಷಗಾನ ಕಲಾವಿದ ವಾಸುದೇವ ಶೆಟ್ಟಿ ಮಾರ್ನಾಡ್, ಜಾನಪದ ಕಲಾವಿದ ರಮೇಶ ಶೆಟ್ಟಿ ಮಾರ್ನಾಡ್, ಕಂಠದಾನ ಕಲಾವಿದ ಸುರೇಂದ್ರ ಕುಮಾರ ಮಾರ್ನಾಡ್ ಸೇರಿದಂತೆ ಐವರು ಸುಪುತ್ರರು, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕಿ ಸವಿತಾ ಶೆಟ್ಟಿ ಮತ್ತು ಬೆಂಗಳೂರು ನಿವಾಸಿ ಸುಜಾತ ಶೆಟ್ಟಿ (ಇಬ್ಬರು ಸುಪುತ್ತಿಯರು), ಅಪಾರ ಬಂಧು ಬಳಗ ಅಗಲಿದ್ದಾರೆ.
