ಕೈಕಂಬ : ಯಕ್ಷ ಕಲಾ ಸಂಘ ವರಕೋಡಿ ಬಡಗಬೆಳ್ಳೂರು ಯಕ್ಷಧಾಮದ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಸಮಾರಂಭ ಸರಕಾರದ ಕೋವಿಡ್ ನಿಯಮದಂತೆ ಸರಳವಾಗಿ ಆಚರಿಸಲಾಯಿತು. ಧ್ವಜಾರೋಹಣವನ್ನು ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾರ್ಥಮಿಕ ಶಾಲೆಯ ನಿವೃತ್ತ ಅಧ್ಯಾಪಕ ಗಂಗಾಧರ ರೈ ಕಮ್ಮಾಜೆ ಮತ್ತು ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸುತ್ತಿರುವ ಯೋಧ ಸ್ಕಂದ ರಾಜ್ ಇವರು ನೆರವೇರಿಸಿದರು.WhatsApp Image 2021-08-16 at 12.54.30 PMಸಭೆಯನ್ನು ಉದ್ದೇಶಿಸಿ ಮಾತನಾಡಿದ ಗಂಗಾಧರ ರೈ ಆವರು ಸ್ವಾತಂತ್ರ್ಯ ಹೋರಾಟಗಾರರ ಗುಣಗಾನ ಮಾಡಿದರು. ಯುವ ಸಮುದಾಯ ದೇಶದ ಏಳಿಗೆಗೆ ಶ್ರಮಿಸಬೇಕು ಎಂದು ಕರೆನೀಡಿದರು ಹಾಗೂ ದೇಶ ಕಾಯುವ ಯೋಧರ  ಶ್ರಮದ ಬಗ್ಗೆ ಮಾತಾಡಿದರು ಕಾರ್ಯಕ್ರಮ ದಲ್ಲಿ ಆನಾರೊಗ್ಯದಿಂದ ತನ್ನ ಕಾಲಿನ ಹೆಬ್ಬೆರಳನ್ನು ಕಳೆದುಕೊಂಡು ಭವಿಷ್ಯದ ದಿನಗಳಲ್ಲಿ ದುಡಿಯುವ ಅವಕಾಶ ಬಹುತೇಕ ಕಳೆದುಕೊಂಡಿರುವ ವರಕೋಡಿ ಪ್ರೇಮನಾಥ್ ಪೂಜಾರಿ ಅವರಿಗೆ ಯಕ್ಷ ಕಲಾ ಸಂಘ ದ ವತಿಯಿಂದ ಧನಸಹಾಯ ನೀಡಲಾಯಿತು.WhatsApp Image 2021-08-16 at 12.54.29 PM (1)ಸಂಘದ ಕಾರ್ಯವೈಖರಿ ಮೆಚ್ಚಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಯೋಧ ಸ್ಕಂದ ರಾಜ್ ಇವರು ಕೂಡ ತಮ್ಮ ವತಿಯಿಂದ ಧನಸಹಾಯ ನೀಡಿ ಸಹಕರಿಸಿದರು ಬಳಿಕ ಸಾಂಕೇತಿಕ ಕ್ರೀಡಾ ಸ್ಪರ್ಧೆಗಳು ನಡೆದವು. ಯಕ್ಷಕಲಾ ಸಂಘದ ಅಧ್ಯಕ್ಷ ದಿನೇಶ್ ವರಕೋಡಿ ಉಪಾಧ್ಯಕ್ಷ ರಾಜ್ ಕಿರಣ್ ಕಾರ್ಯದರ್ಶಿ ಗಣೇಶ್ ಭಂಡಾರಿ ಕೋಶಾಧಿಕಾರಿ ಶಂಕರ್ ಪೂಜಾರಿ ಮಜಿಬೈಲು ಹಾಗೂ ಸಂಘದ ಸರ್ವ ಸದಸ್ಯರು ಹಾಗೂ ಸಂಘದ ಹಿತೈಷಿಗಳು ದೇಶ ಭಕ್ತ ಬಂಧುಗಳು ಹಾಜರಿದ್ದರು.WhatsApp Image 2021-08-16 at 12.54.29 PM

By Suddi9

Leave a Reply

Your email address will not be published. Required fields are marked *