ಬಂಟ್ವಾಳ: ಬಂಟ್ವಾಳ ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಕಟ್ಟೆ ಸಂಗಬೆಟ್ಟು ಎಂಬಲ್ಲಿನ ಒಬ್ಬಂಟಿ ೫೪ ವರ್ಷದ ಮಹಿಳೆಯನ್ನು ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ ಅತ್ಯಾಚಾರವೆಸಗಿ ಕೊಲೆ ಬೆದರಿಕೆಒಡ್ಡಿದ ಘಟನೆ ಆ.೧೧ ರಂದು ಸಂಘಬೆಟ್ಟುವಿನಲ್ಲಿ ನಡೆದಿದೆ.ಅತ್ಯಾಚಾರ ನಡೆಸಿದ ಆರೋಪಿ ಅನಿಲ್ ಸಿದ್ದಕಟ್ಟೆ ಎಂದು ತಿಳಿದುಬಂದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.images

ಅತ್ಯಾಚಾರಕ್ಕೊಳಗಾದ ಮಹಿಳೆ ಸಿದ್ದಕಟ್ಟೆ ಸಂಗಬೆಟ್ಟು ನಿವಾಸಿಯಾಗಿದ್ದು.ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು ಇವರ ಗಂಡನನ್ನು ಕಳೆದುಕೊಂಡು ಮಗಳೊಂದಿಗೆ ವಾಸವಾಗಿದ್ದ ಅವರು ಕೆಲವು ವರ್ಷಗಳ ಹಿಂದೆ ಮಗಳಿಗೆ ಮದುವೆ ಮಾಡಿ ಮನೆಯಲ್ಲಿ ಒಬ್ಬಂಟಿಯಾಗಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.

ಇ ಸಂದರ್ಭವನ್ನು ಉಪಯೋಗಿಸಿದ ಆರೋಪಿ ಅನಿಲ್ ಮಹಿಳೆಯನ್ನು ಬಲತ್ಕಾರವಾಗಿ ಎಳೆದುಕೊಡು ಹೋಗಿ ಹಲ್ಲೆ ನಡೆಸಿ ಬಲತ್ಕಾರದಿಂದ ಅತ್ಯಾಚಾರ ಮಾಡಿ ಬಳಿಕ ಯಾರಿಗಾದರು ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ.ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ.

By suddi9

Leave a Reply

Your email address will not be published. Required fields are marked *