ಕೈಕಂಬ : ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ‘ನಾಗರಪಂಚಮಿ’ ಹಬ್ಬದ ನಿಮಿತ್ತ ನೂರಾರು ಭಕ್ತರು ನಾಗಬನದಲ್ಲಿ ನಾಗ ದೇವರಿಗೆ ಹಾಲೆರೆದು, ಸೀಯಾಳಾಭಿಷೇಕ ಮಾಡಿಸಿ ಪುನೀತರಾದರು.gur-aug-13-koladabadi-2ಕೋವಿಡ್-೧೯ ಮಹಾಮಾರಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶದಂತೆ ದೇವಸ್ಥಾನದಲ್ಲಿ ಭಕ್ತರಿಗೆ ವಿಶೇಷ ಸರದಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಪೂಜೆ ಸಲ್ಲಿಸುವ ಭಕ್ತರೆಲ್ಲರೂ ಮಾಸ್ಕ್ ಧರಿಸುವಂತೆ ಹಾಗೂ ಅಂತರ ಕಾಪಾಡಿಕೊಳ್ಳುವಂತೆ ಸ್ವಯಂ ಸೇವಕರು ಎಚ್ಚರ ವಹಿಸಿದ್ದರು.gur-aug-13-koladabadi-3ಕುಡುಪುವಿನ ನಾಗಬನ ಜೀರ್ಣೋದ್ಧಾರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಪುಷ್ಕರಣಿ ಪಕ್ಕದಲ್ಲಿ ನಾಗದೇವರ ಆರಾಧನೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಭಕ್ತರ ಸಂಖ್ಯೆ ವಿರಳವಾಗಿದ್ದು, ದೇವಸ್ಥಾನದ ವತಿಯಿಂದ ಅನ್ನದಾನ ನಿಷೇಧಿಸಲಾಗಿದೆ. ದೇವಸ್ಥಾನದ ಪ್ರಧಾನ ಅರ್ಚಕ ನರಸಿಂಹ ತಂತ್ರಿ ಪೌರೋಹಿತ್ಯದಲ್ಲಿ ನಾಗರಪಂಚಮಿ ಪೂಜೆ-ಪುನಸ್ಕಾರ ನಡೆಯಿತು.gur-aug-13-kudupu-4

By Suddi9

Leave a Reply

Your email address will not be published. Required fields are marked *