ಕೈಕಂಬ : ಗುರುಪುರಕ್ಕೆ ಹತ್ತಿರದ ಉಳಾಯಿಬೆಟ್ಟುವಿನಲ್ಲಿ ಗುರುಪುರ ಪೊಳಲಿ ದ್ವಾರ ಬಳಿಯ ಬಾಮಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಬಸ್ ಫಲ್ಗುಣಿ ನದಿಗೆ ಉರುಳಿದ ಭೀಕರ ದುರಂತಕ್ಕೆ ಇಂದಿಗೆ ೧೩ ವರ್ಷ. ಈ ದುರ್ಘಟನೆಯಲ್ಲಿ ಶಾಲೆಯ ೭ ಮಂದಿ ವಿದ್ಯಾರ್ಥಿಗಳು ಮತ್ತು ಮಕ್ಕಳನ್ನು ರಕ್ಷಿಸಲು ಮುಂದಾಗಿದ್ದ ನಾಲ್ವರು ಸೇರಿ ಒಟ್ಟು ೧೧ ಮಂದಿ ನೀರುಪಾಲಾಗಿದ್ದರು.gur-aug-13-bus-1೨೦೦೮ ಆಗಸ್ಟ್ ೧೪ರ ಬೆಳಿಗ್ಗೆ ಧಾರಾಕಾರ ಮಳೆ ಸುರಿಯುತ್ತಿದ್ದು, ಗುರುಪುರ ಫಲ್ಗುಣಿ ನದಿ ಉಕ್ಕೇರಿ ಹರಿಯುತ್ತಿತ್ತು. ಶಾಲೆಗೆ ರಜೆ ಸಾರಲಾದ ಕಾರಣ ಸುಮಾರು ೩೦ ಮಕ್ಕಳಿದ್ದ ಬಸ್ ಗುರುಪುರ ಜಂಕ್ಷನ್ ಮೂಲಕ ಉಳಾಯಿಬೆಟ್ಟಿನತ್ತ ಸಾಗಿತ್ತು. ಇವರಲ್ಲಿ ಕೆಲವರು ದಾರಿಮಧ್ಯೆ ಇಳಿದಿದ್ದರು. ಉಳಾಯಿಬೆಟ್ಟುವಿನ ಬಳಿ ರಸ್ತೆ ಪ್ರವಾಹದಿಂದ ಜಲಾವೃತಗೊಂಡಿದ್ದರೂ ಚಾಲಕ ಧೈರ್ಯ ಮಾಡಿ, ಮುಂದುವರಿಯಲು ಪ್ರಯತ್ನಿಸಿದಾಗ ನಿಯಂತ್ರಣ ತಪ್ಪಿ ಕ್ಷಣಾರ್ಧದಲ್ಲಿ ಬಸ್ ನದಿಗೆ ಜಾರಿ ನೀರಲ್ಲಿ ಮುಳುಗಿತ್ತು. ಸ್ಥಳೀಯರು ಕೆಲವು ಮಕ್ಕಳನ್ನು ಪ್ರಾಣಾಪಾಯದಿಂದ ರಕ್ಷಿಸಿದರೆ, ಉಳಾಯಿಬೆಟ್ಟಿನ ಇಲೆಕ್ಟ್ರೀಶಿಯನ್ ಕಮಲಾಕ್ಷ, ಚಾಲಕ ಬದ್ರುದ್ದೀನ್, ಅಬೂಬಕ್ಕರ್ ಹಾಗೂ ಇನ್ನೊಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿದ್ದರು.gur-aug-13-bus-2‘ಜಿಲ್ಲೆ, ರಾಜ್ಯದಲ್ಲೇ ಭಾರೀ ಸದ್ದು ಮಾಡಿದ್ದ ಅಂದಿನ ದುರ್ಘಟನೆಯು ಪ್ರತಿ ವರ್ಷ ನೆನಪಿಗೆ ಬರುತ್ತಿದೆ. ಇಂತಹ ಘಟನೆ ಮತ್ತೆಲ್ಲೂ ನಡೆಯದಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೇವೆ” ಎಂದು ಬಾಮಿ ಶಾಲೆಯ ಎಚ್‌ಆರ್ ರಿಯಾಝ್ ಮಿಲನ್ ಗುರುಪುರ ಹೇಳುತ್ತಾರೆ.

By Suddi9

Leave a Reply

Your email address will not be published. Required fields are marked *