ಸುದ್ದಿ9ಮೂಡುಬಿದರೆ: ಇಲ್ಲಿನ ಸಿದ್ದಾಂತ ಮಂದಿರದಲ್ಲಿ ಕೋಟ್ಯಾಂತರ ಮೌಲ್ಯದ ವಿಗ್ರಹ ಕಳವು ಪ್ರಕರಣದ ಪ್ರಮುಖ ಆರೋಪಿ ಘನಶ್ಯಾಮ್ ಯಾನೆ ಸಂತೋಷ್ದಾಸ್ ಮಂಗಳೂರು ಜೈಲಿನಿಂದ ಶನಿವಾರ ಬಿಡುಗಡೆಗೊಂಡಿದ್ದಾನೆ. ಸಂತೋಷ್ ದಾಸ್ ವಿರುದ್ಧ ವಿರುದ್ದ ರಾಜ್ಯಾದ್ಯಂತ ಒಟ್ಟು ಎಪ್ಪತ್ತಮೂರು ಕಳವು ಪ್ರಕರಣಗಳು ದಾಖಲಾಗಿದ್ದು, ಇವುಗಳ ಪೈಕಿ ಹದಿನೈದು ಪ್ರಕರಣಗಳಲ್ಲಿ ದೋಷ ಮುಕ್ತಗೊಂಡು ಉಳಿದ ಎಂಟು ಪ್ರಕರಣದಲ್ಲಿ ಜಾಮೀನು ಲಬಿಸಿದೆ. ಕಳೆದ ವರ್ಷ ಜುಲೈ 5 ರಂದು ತಡರಾತ್ರಿ ಮೂಡಬಿದರೆ ಗುರು ಬಸದಿಯ ಸಿದ್ದಾಂತ ಮಂದಿರದಲ್ಲಿನ ಕೋಟ್ಯಾಂತರ ಮೌಲ್ಯದ ವಿಗ್ರಹಗಳ ಕಳವು ನಡೆದಿತ್ತು. ಜುಲೈ 13ರಂದು ಒಡಿಶಾದಲ್ಲಿ ಸಂತೋಷ್ದಾಸ್ನ ಮಾವ ದಿಗಂಭರ ಮೊಹಂತಿ ಮತ್ತು ಪತ್ನಿ ದೀಪ್ತಿಮಹಿ ಯನ್ನು ಪೋಲಿಸರು ಬಂದಿಸಿದ್ದರು. 22 ದಿನಗಳ ಬಳಿಕ ದಾಸ್ನ ಬಂದನವಾಗಿತ್ತು. ಬಳಿಕ ದಾಸ್ನ ಮಾವ ಮತ್ತು ಪತ್ನಿ ಜಾಮೀನು ಪಡೆದು ಬಿಡುಗಡೆ ಗೊಂಡಿದ್ದರು. ಸಿದ್ದಾಂತ ಮಂದಿರ ಕಳವು ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಾಸ್ ಬಂದಿತನಾಗಿ ಕರಾವಳಿ ಭಾಗದ ಇತರ ಕಳವು ಪ್ರಕರಣದಲ್ಲೂ ಬಾಗಿಯಾಗಿರುವ ಸುಳಿವನ್ನು ಪೋಲಿಸರಿಗೆ ನೀಡಿದ್ದ ಎಂಬ ಕಾರಣಕ್ಕೆ ಈತನ ವಿರುದ್ದ ವಿವಿದೆಡೆ ಹಲವು ಕಳವು ಪ್ರಕರಣ ದಾಖಲಾಗಿತ್ತು. ದಾಖಲಾದ ಒಟ್ಟು 23 ಪ್ರಕರಣಗಳಲ್ಲಿ ಈತನ ಪರ ಮೂಡಬಿದರೆ ವಕೀಲ ನಾಗೇಶ್ ಶೆಟ್ಟಿ ವಾದಿಸಿದ್ದು, ಈತನನ್ನು ದೋಷಮುಕ್ತ ಗೊಳಿಸುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ಹದಿನೈದು ಪ್ರಕರಣದಲ್ಲಿ ಈತನನ್ನು ಜಿಲ್ಲಾ ಸೆಶನ್ಸ್ ನ್ಯಾಯಾಲಯ ದೋಷ ಮುಕ್ತಗೊಳಿಸಿದೆ. ಸದ್ಯ ಈತನ ವಿರುದ್ದ ಮೂಡಬಿದರೆಯಲ್ಲಿ ಎರಡು, ಕುಮುಟಾದಲ್ಲಿ ಎರಡು, ಮೂಡಿಗೆರೆಯಲ್ಲಿ ಒಂದು, ಕಾರ್ಕಳದಲ್ಲಿ ಒಂದು, ಕುಂದಾಪುರದಲ್ಲಿ ಒಂದು, ಮಂಗಳೂರಿನಲ್ಲಿ ಒಂದು ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಎಲ್ಲಾ ಪ್ರಕರಣಗಳಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.






