ಮುಂಬಯಿ  : ಕೃತಿಗಳು ಎಷ್ಟೇ ಬಂದರೂ ಕೂಡಾ ಅದರಲ್ಲಿ ಮೌಲ್ಯ ಮುಖ್ಯವಾಗುತ್ತದೆ. ಅದೇ ರೀತಿ ಕತೆಗಳಲ್ಲಿಯೂ ಗುಣಮಟ್ಟವನ್ನು ಗಮನಿಸಬೇಕು. ಶ್ರೀನಿವಾಸ ಜೋಕಟ್ಟೆ ಅವರನ್ನು ನಾನು ಪ್ರಾಥಮಿಕ ಶಾಲಾ ದಿನಗಳಿಂದಲೂ ಬಲ್ಲೆ. ಮುಂಬಯಿಯಲ್ಲಿದ್ದರೂ ಅವರಲ್ಲಿನ ಸಾಹಿತ್ಯದ ಉತ್ಸಾಹಕ್ಕೆ ಖುಷಿಗೊಂಡಿದ್ದೇನೆ ಎಂದು ಪ್ರಶಸ್ತಿವಿಜೇತ ಕವಿ, ಕತೆಗಾರ, ಗೋಕರ್ಣನಾಥ ಕಾಲೇಜ್‌ನ ನಿವೃತ್ತ ಇಂಗ್ಲಿಷ್ ಉಪನ್ಯಾಸಕ ಪೇಜಾವರ ಹರಿಯಪ್ಪ ಹೇಳಿದರು.Shrinivasa Jokatte Books (C)ಮುಂಬಯಿ ಲೇಖಕ ಶ್ರೀನಿವಾಸ ಜೋಕಟ್ಟೆ ಅವರು ಮುಂಬಯಿ ಬಗ್ಗೆ ಬರೆದ ‘ಮುಂಬಯಿ ಮಿಂಚು’ (ನನಗೆ ದಕ್ಕಿದಷ್ಟು ಮಹಾನಗರ) ಲೇಖನಗಳ ಕೃತಿ ಮತ್ತು ೩೯ನೇ ಕೃತಿ ‘ಶ್ರೀನಿವಾಸ ಜೋಕಟ್ಟೆ ಸಮಗ್ರ ಕತೆಗಳು’ ಕಥಾಸಂಕಲನ ಬಿಡುಗಡೆ ಕಾರ್ಯಕ್ರಮ  ಜು.೨೮ ರಂದು ಬುಧವಾರ ಮಂಗಳೂರು ಇಲ್ಲಿನ  ಶ್ರೀನಿವಾಸ ಹೊಟೇಲ್ ಸಭಾಗೃಹದಲ್ಲಿ ನಡೆಸಲಾಗಿದ್ದು ಕಾರ್ಯಕ್ರಾದ ಅಧ್ಯಕ್ಷತೆ ವಹಿಸಿ ಪೇಜಾವರ ಮಾತಾಡಿದರು.Shrinivasa Jokatte Books 1ವಿಜಯ ಕರ್ನಾಟಕ ದೈನಿಕದ ಮಂಗಳೂರು ಆವೃತ್ತಿ ಸಂಪಾದಕ ಯು.ಕೆ ಕುಮಾರನಾಥ್ ‘ಮುಂಬಯಿ ಮಿಂಚು’ ಕೃತಿ ಬಿಡುಗಡೆಗೊಳಿಸಿದ ಮಾತನಾಡಿ ಜೋಕಟ್ಟೆ ಅವರು ಮುಂಬಯಿಯಲ್ಲಿದ್ದು ಅಲ್ಲಿನ ವಿಚಾರಗಳನ್ನು ವಿಭಿನ್ನ ದೃಷ್ಟಿಯಿಂದ ಗ್ರಹಿಸಿ ಬರೆಯುವ ಅವರ ಬರಹಗಳು ಓದುಗರಿಗೆ ಆಪ್ತವಾಗುತ್ತವೆ ಎನ್ನುತ್ತಾ, ಜೋಕಟ್ಟೆಯವರು ಮುಂಬೈಯ ಕೊರೊನಾ ಕಾಲದ ದಿನಗಳ ಕುರಿತಂತೆ ಅಲ್ಲಿನ ದೃಶ್ಯಗಳನ್ನು ಬಿಚ್ಚಿಡುವ ಒಂದು ಕೃತಿಯನ್ನು ಆದಷ್ಟು ಶೀಘ್ರ ತರುವಂತಾಗಲಿ ಎಂದು ಆಶಿಸಿದರು.Shrinivasa Jokatte Books 2ಮಂಗಳ ವಾರಪತ್ರಿಕೆಯ  ಮಂಗಳೂರು ವಿಭಾಗದ ಟಿ.ಕೆ. ಸುನಿಲ್ ಕುಮಾರ್ `ಶ್ರೀನಿವಾಸ ಜೋಕಟ್ಟೆ ಸಮಗ್ರ ಕಥೆಗಳು’ಕಥಾ ಸಂಕಲನ ಬಿಡುಗಡೆ ಮಾಡಿ ಮಾತನಾಡಿ ಜೋಕಟ್ಟೆ ಅವರ ಬರಹಗಳು ಬರೇ ಮುಂಬಯಿಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಕರಾವಳಿಯ ಚಿತ್ರಣಗಳನ್ನೂ ಜೊತೆಯಾಗಿ ಇಟ್ಟುಕೊಂಡು ಸಾಗಿಸುವ ಅವರ ಬರವಣಿಗೆಯು ಮುದ ನೀಡುತ್ತವೆ ಎಂದರು.Shrinivasa Jokatte Books 3ಲೇಖಕಿ ಉಪನ್ಯಾಸಕಿ ನಾಗವೇಣಿ ಮಂಚಿ ಮತ್ತು ಸಂಯುಕ್ತ ಕರ್ನಾಟಕದ ಮಂಗಳೂರು ಬ್ಯೂರೋ ಚೀಫ್ ರಾಮಕೃಷ್ಣ ಆರ್ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ ಶ್ರೀನಿವಾಸ ಜೋಕಟ್ಟೆ ಅವರ ಮುಂಬಯಿ ಮತ್ತು ಮಂಗಳೂರು ನಂಟನ್ನು ನೆನಪಿಸಿಕೊಳ್ಳುತ್ತಾ  ೩೯ನೇ ಕೃತಿ ಮಂಗಳೂರಲ್ಲಿ ಬಿಡುಗಡೆ ಗೊಂಡಿರುವುದು ನಮಗೂ ಅಭಿಮಾನದ ಸಂಗತಿ ಎಂದರು.Shrinivasa Jokatte Books 4ನನಗೆ ಮುಂಬೈಯಷ್ಟೇ ಮಂಗಳೂರಿನ ಸೆಳೆತವನ್ನೂ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.ಈ ಹಿಂದೆ ಮತ್ತೆ ಮಂಗಳೂರಿಗೆ ಮರಳಿದ್ದ ದಿನಗಳಲ್ಲಿ ಇಲ್ಲಿನ ಪತ್ರಕರ್ತ ಗೆಳೆಯರು ನೀಡಿದ  ಪ್ರೀತಿ ವಿಶ್ವಾಸದಿಂದಾಗಿ ಮುಂಬಯಿ  ಜೊತೆಗೆ ಕೆಲವೊಮ್ಮೆ ನಾನು ಮಂಗಳೂರಲ್ಲಿಯೂ ಕೃತಿಗಳ ಬಿಡುಗಡೆ ಮಾಡಿರುವುದು ನನಗೆ ಖುಷಿಯ ಸಂಗತಿಯಾಗಿದೆ. ಆ ಮೂಲಕ ನನಗೆ ಮುಂಬೈಯ ಕನ್ನಡ ಕಾರ್ಯಕ್ರಮಗಳನ್ನೂ ನಿಮ್ಮೆಲ್ಲರ ಮುಂದಿಡುವ ಒಂದು ಅವಕಾಶವೂ ಲಭಿಸಿದಂತಾಗುತ್ತದೆ ಎಂದು ಕೃತಿಕಾರರ ಶ್ರೀನಿವಾಸ ಜೋಕಟ್ಟೆ ತಿಳಿಸಿದರು.Shrinivasa Jokatte Books 5ಪತ್ರಕರ್ತರಾದ ಎಸ್.ಜಯರಾಮ್ ಮತ್ತು ರಾಮಕೃಷ್ಣ ಆರ್, ರೇಷ್ಮಾ ಉಳ್ಳಾಲ್ ಈ ಕಾರ್ಯಕ್ರಮ ಆಯೋಜಿಸಿದ್ದು ವಿಶ್ವವಾಣಿ ದೈನಿಕದ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಶುಭಹಾರೈಸಿದರು.Shrinivasa Jokatte Books 6

Shrinivasa Jokatte Books 7

By Suddi9

Leave a Reply

Your email address will not be published. Required fields are marked *