ಮುಂಬಯಿ : ಬಂಟ್ವಾಳ ಮೊಡಂಕಾಪು ಇಲ್ಲಿನ ಸಿಬಿಲ್ ವಿಲ್ಲಾ ನಿವಾಸಿ, ಹಿರಿಯ ಶಿಕ್ಷಕಿ, ಭಾರತೀಯ ಭೂಸೇನಾ ನಿವೃತ್ತ ಯೋಧ ಬೆನ್ನಾ ಲೂಯಿಸ್ ಇವರ ಧರ್ಮಪತ್ನಿ ಲೀನಾ ಲೂಯಿಸ್ ನೀ ಮಸ್ಕರೇನ್ಹಾಸ್ (೭೫.) ಅಲ್ಪ ಕಾಲದ ಅಸ್ವಸ್ಥತೆಯಿಂದ ಜು.೨೬ ರಂದು ಸೋಮವಾರ ತನ್ನ ಸ್ವನಿವಾಸ ಸಿಬಿಲ್ ವಿಲ್ಲಾ ಇಲ್ಲಿ ನಿಧನರಾದರು.
ಸುಮಾರು ಮೂರು ದಶಕಗಳಿಂದ ಬಂಟ್ವಾಳದ ಸರಪಾಡಿ-ಮುನ್ಕಾಜೆಮಾಡ್, ಜಕ್ರಿಬೆಟ್ಟು, ನಂದಾವರ ಇಲ್ಲಿನ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಶ್ರಮಿಸಿ ನಿವೃತ್ತಿ ಹೊಂದಿದ್ದರು. ಮೃತರು ಪತಿ, ಎರಡು ಗಂಡು, ಒಂದು ಹೆಣ್ಣು ಮಕ್ಕಳು ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ (ಜು.೨೮) ಪೂರ್ವಾಹ್ನ ೯.೩೦ ಗಂಟೆಗೆ ಸ್ವನಿವಾಸದಿಂದ ಹೊರಟು ಇನ್ಫೆಂಟ್ ಜೀಸಸ್ ಚರ್ಚ್ ಮೊಡಂಕಾಪು ಇಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲವು ತಿಳಿಸಿದೆ.
