ಕೈಕಂಬ : ಗುರುಪುರದ ಬಾಮಿ ಶಾಲೆಯಲ್ಲಿ ಮಾಜಿ ಶಾಸಕ ಮೊಯಿದಿನ್ ಬಾವಾ ತೆರೆದಿದ್ದ ಕೋವಿಡ್ ಕೇರ್ ಸೆಂಟರ್ ಕಳೆದ ಒಂದೂವರೆ ತಿಂಗಳಲ್ಲಿ ಅಶಕ್ತ ಸೋಂಕಿತರ ಸೇವೆ ನಡೆಸಿದ್ದು,  ಜೂ.7ರಂದು ಸೋಮವಾರ ಸರಳ ಸಮಾರೋಪ ಸಮಾರಂಭ ನಡೆಯಿತು.gur-june-7-bava-1

ಕೇಂದ್ರದಲ್ಲಿ ಹಗಲಿರುಳು ಸೇವೆ ಸಲ್ಲಿಸಿದ ಕೊರೊನಾ ವಾರಿಯರ್ಸ್ ತಂಡದ ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಿದ ಬಾವಾ, “ತಾತ್ಕಾಲಿಕ ನೆಲೆಯಲ್ಲಿ ಗುರುಪುರ ಸಹಿತ ಅಡ್ಯಾರು ಮತ್ತು ಕಾಟಿಪಳ್ಳದಲ್ಲಿ ತೆರೆಯಲಾಗಿರುವ ಏಳು ಕೋವಿಡ್ ಕೇರ್ ಸೆಂಟರ್‌ಗಳ ವೈದ್ಯಕೀಯ ಉಸ್ತುವಾರಿ ನೋಡಿಕೊಂಡಿರುವ ಡಾ. ಭಾಸ್ಕರ್ ಕೂಳೂರು ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.gur-june-7-Dr.bhaskar-1

ಮಾಜಿ ಶಾಸಕ ಮೊಯಿದಿನ್ ಬಾವಾ ಮಾತನಾಡಿ, ಇದೊಂದು ದೇವರ ಕೆಲಸವೆಂಬಂತೆ ಇಲ್ಲಿನ ಕೊರೊನಾ ವಾರಿಯರ್ಸ್ಗಳು ಹಗಲಿರುಳು ಸೋಂಕಿತರ ಸೇವೆ ಮಾಡಿದ್ದಾರೆ. ಎಲ್ಲ ಏಳು ಸೆಂಟರ್‌ಗಳಲ್ಲಿ ¸೩೦೦ಕ್ಕೂ ಅಧಿಕ ಅಶಕ್ತ ಸೋಂಕಿತರು ಸುಶ್ರೂಷೆ ಪಡೆದುಕೊಂಡಿದ್ದಾರೆ. ಸೆಂಟರ್ ತೆರೆಯಲು ಡೀಸಿಯವರು ವಿಶೇಷ ಅನುಮತಿ ನೀಡಿ ಸಹಕರಿಸಿದ್ದಾರೆ. ಸ್ಥಳೀಯ ಕಾಂಗ್ರೆಸ್ಸಿಗರು ಸಹಕಾರ ಮರೆಯುವಂತಿಲ್ಲ. ಯಾವುದೇ ಕುಂದುಕೊರತೆ ಇಲ್ಲದೆ ಮುಂದುವರಿದಿರುವ ಸೆಂಟರ್‌ನ ಸೇವೆ ಇಂದಿಗೆ ಕೊನೆಗೊಳ್ಳುತ್ತಿದ್ದರೂ, ನನ್ನಿಂದ ಬಡವರ ಸೇವೆ ನಿರಂತರವಾಗಿರುತ್ತದೆ ಎಂದರು.

ಹುಸೈನ್ ಕಾಟಿಪಳ್ಳ ಪ್ರಸ್ತಾವಿಕ ಮಾತನಾಡಿದರು. ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಗುರುಪುರ ಕೋವಿಡ್ ಕೇರ್ ಸೆಂಟರ್‌ನ ಉಸ್ತುವಾರಿ ಯುವ ನಾಯಕ ಮುಫೀದ್ ಅಡ್ಡೂರು, ಗುರುಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಮಲ್ಲಿ, ಪಂಚಾಯತ್ ಸದಸ್ಯ ದಾವೂದ್, ಶಾಲಾ ಸಂಚಾಲಕ ರಿಯಾಝ್ ಮಿಲನ್, ಸ್ಥಾಪಕ ಮೊಹಮ್ಮದ್ ಗುರುಪುರ, ಕಾರ್ಯದರ್ಶಿ ಸೈಫುಲ್ಲ ಗುರುಪುರ, ಜಿಪಂ ಮಾಜಿ ಸದಸ್ಯ ಯು ಪಿ ಇಬ್ರಾಹಿಂ, ಹರೀಶ್ ಭಂಡಾರಿ, ಪಂಚಾಯತ್ ಮಾಜಿ ಸದಸ್ಯೆ ಉಮೈ ಬಾನು ಮತ್ತಿತರರು ಉಪಸ್ಥಿತರಿದ್ದರು.

ಮುಫೀದ್ ಸ್ವಾಗತಿಸಿದರು. ಅಬ್ದುಲ್ ಸಮದ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು, ಸೈಫುಲ್ಲ ಕಾಟಿಪಳ್ಳ ವಂದಿಸಿದರು. ಕೋವಿಡ್ ಕೇರ್ ಸೆಂಟರ್‌ಗೆ ವೈದ್ಯಕೀಯ ಸಲಹೆ ನೀಡಿದ ಡಾ. ಸಿದ್ಧಿಕ್ ಅಡ್ಡೂರು, ಡಾ. ಶ್ವೇತಾ ಪ್ರಭು ಗುರುಪುರ, ಸಹಾಯಕ ರೆಹಮಾನ್ ಅಡ್ಡೂರು ಅವರನ್ನು ಸ್ಮರಿಸಲಾಯಿತು.

By suddi9

Leave a Reply

Your email address will not be published. Required fields are marked *