ಕೈಕಂಬ:ಪರಿಸರ ದಿನದಂಗವಾಗಿ ಗುರುಪುರ ಕಾರಮೊಗರುವಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನ ರಸ್ತೆಯ ಇಕ್ಕೆಲಗಳಲ್ಲಿ ಇಂಡಿಯನ್ ಸೀನಿಯರ್ ಚೇಂಬರ್ ಮಂಗಳೂರು ಘಟಕ ವತಿಯಿಂದ ಗಿಡ ನೆಡಲಾಯಿತು.
ಇಂಡಿಯನ್ ಸೀಸಿಯರ್ ಚೇಂಬರ್ ರಾಷ್ಟ್ರೀಯ ಅಧ್ಯಕ್ಷ ಡಾ. ಕೇದಿಗೆ ಅರವಿಂದ ರಾವ್, ಹಿರಿಯ ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ, ಚೇಂಬರ್ ಮಂಗಳೂರು ಘಟಕದ ಪ್ರಥಮ ಮಹಿಳೆ ಗಾಯತ್ರಿ ಎ ರಾವ್, ಚೇಂಬರ್‍ನ ಮಂಗಳೂರು ಘಟಕಾಧ್ಯಕ್ಷ ಜಿ ಕೆ ಹರಿಪ್ರಸಾದ್ ರೈ, ಕಾರ್ಯದರ್ಶಿ ಶಾಲಿನಿ ಪಿ ಸುವರ್ಣ, ದೇವಳದ ಆಡಳಿತ ಮೊಕ್ತೇಸರ ಡಾ. ರವಿರಾಜ ಶೆಟ್ಟಿ ಕಾರಮೊಗರುಗುತ್ತು, ದಿವ್ಯಾ ಎಚ್ ರೈ, ಜಿ ಕೆ ವಸಂತ ರೈ ಮತ್ತಿತರರು ಉಪಸ್ಥಿತರಿದ್ದರು. ಇಲ್ಲಿ ಅರಣ್ಯ ಇಲಾಖೆ ಒದಗಿಸಿದ 100 ಗಿಡ ನೆಡಲಾಯಿತು.
