ಕೈಕಂಬ : ಗುರುಪುರ ಪಂಚಾಯತ್ ಕಚೇರಿ ಆವರಣದಲ್ಲಿ ಶನಿವಾರ ಗಿಡ ನೆಟ್ಟು ಪರಿಸರ ದಿನಾಚರಣೆ ಆಚರಿಸಲಾಯಿತು.ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ, ಉಪಾಧ್ಯಕ್ಷೆ ದಿಲ್ಶಾದ್ ಎ, ಸದಸ್ಯರಾದ ಬಾಳಪ್ಪ, ಸದಾಶಿವ ಶೆಟ್ಟಿ ಕಲ್ಲಕಲಂಬಿ, ದಾವೂದ್ ಬಂಗ್ಲೆಗುಡ್ಡೆ ಅವರುಗಳು ತೆಂಗು ಹಾಗೂ ಹಣ್ಣಿನ ಗಿಡಗಳನ್ನು ನೆಟ್ಟರು. ಪಿಡಿಒ ಅಬೂಬಕ್ಕರ್, ಮಾಜಿ ಸದಸ್ಯ ಹನೀಫ್, ಗುರುಪುರ ಕೈಕಂಬ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ(ಎಎಚ್‍ಒ) ಮಹೇಶ್, ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.
