ಕೈಕಂಬ : ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಬಂಗ್ಲೆಗುಡ್ಡೆಯ ಮನೆಗಳು, ಪಂಚಾಯತ್ ಹಾಗೂ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಮಂಗಳವಾರ ಗುರುಪುರ ಕಾಂಗ್ರೆಸ್ ಮತ್ತು ಯೂತ್ ಕಾಂಗ್ರೆಸ್ ವತಿಯಿಂದ ಸ್ಯಾನಿಟೈಜೇಶನ್ ಕಾರ್ಯ ನಡೆಯಿತು.
ಮಾಜಿ ಶಾಸಕ ಮೊೈದಿನ್ ಬಾವ ಹಾಗೂ ಗುರುಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಮಲ್ಲಿ ಮುಂದಾಳತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯೂತ್ ಕಾಂಗ್ರೆಸ್ ಗುರುಪುರ ವಲಯ ಉಪಾಧ್ಯಕ್ಷ ಮುಫೀದ್, ಜಿಪಂ ನಿಕಟಪೂರ್ವ ಸದಸ್ಯ ಯು ಪಿ ಇಬ್ರಾಹಿಂ, ಪಂಚಾಯತ್ ಸದಸ್ಯ ದಾವೂದ್, ಅಡ್ಡೂರು ಯೂತ್ ಕಾಂಗ್ರೆಸ್ ಅಧ್ಯಕ್ಷ ನಿಯಾಝ್, ಮುಸ್ತಫ, ಉಮೈ ಬಾನು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
