ಕೈಕಂಬ: ಪಂಚಾಯತ್ ಮಟ್ಟದಲ್ಲಿ ಕೋವಿಡ್ ವಾರಿಯರ್ಸ್‍ಗಳಾಗಿ ಕಾರ್ಯನಿರತರಾಗಿರುವ ಗಂಜಿಮಠ ಪಿಎಚ್ ಸಿ ವ್ಯಾಪ್ತಿಯ ಗುರುಪುರ ಆಶಾ ಕಾರ್ಯಕರ್ತೆಯರು ತಾವು ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಬುಧವಾರ ಗಂಜಿಮಠ ಪಿಎಚ್‍ಸಿ ಕಚೇರಿಯಲ್ಲಿ ಶಾಸಕ ಡಾ. ವೈ ಭರತ್ ಶೆಟ್ಟಿಯವರಲ್ಲಿ ಚರ್ಚಿಸಿದರು.
ಆಶಾ ಕಾರ್ಯಕರ್ತೆಯರ ದಣಿವರಿಯದ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು, ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವ ಭರವಸೆ ನೀಡಿದರು.
