ಕೈಕಂಬ : ಸರ್ಕಾರದ ಆದೇಶ ಉಲ್ಲಂಘಿಸುವವರ ವಿರುದ್ಧ ಗುರುಪುರ ಗ್ರಾಮ ಪಂಚಾಯತ್ `ಟಾಸ್ಕ್ ಫೋರ್ಸ್’ ಶುಕ್ರವಾರದಿಂದಲೇ ಕಾರ್ಯಾಚರಣೆ ಆರಂಭಿಸಿದ್ದು, ಮಾಸ್ಕ್ ಧರಿಸದ ವ್ಯಕ್ತಿಗಳಿಂದ ಸುಮಾರು ೫೦೦ ರೂ ದಂಡ ಸಂಗ್ರಹಿಸಿತು. ಜೊತೆಗೆ ಕೋವಿಡ್-೧೯ ಜನಜಾಗೃತಿ, ದಂಡ ಹೇರಿಕೆ ಬಗ್ಗೆ ಮೈಕ್ ಮೂಲಕ ಮಾಹಿತಿ ಪ್ರಸಾರ ಕಾರ್ಯ ಮುಂದುವರಿದಿದೆ.

ಪಿಡಿಒ ಅಬೂಬಕ್ಕರ್ ನೇತೃತ್ವದ ತಂಡವು ಪಂಚಾಯತ್‌ನ ಮೂಳೂರು ಮತ್ತು ಅಡ್ಡೂರು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತು. ತಂಡದಲ್ಲಿ ಬೀಟ್ ಪೊಲೀಸ್, ಪಂಚಾಯತ್ ಸಿಬ್ಬಂದಿ ಇರ್ಶಾದ್ ಒಳಗೊಂಡಿದ್ದರು.

ಅಂಗಡಿಗಳಲ್ಲಿ ಸುರಕ್ಷಿತ ಅಂತರ ಕಾಪಾಡಿಕೊಳ್ಳದೆ, ಮುಗಿಬಿದ್ದು ವ್ಯವಹಾರ ನಡೆಸುವ ಗ್ರಾಹಕರು ಮತ್ತು ಅಂಗಡಿ ಮಾಲಕರ ವಿರುದ್ಧ ನಾಳೆಯಿಂದ ದಂಡ ಹೇರಲಾಗುವುದು ಎಂದು ಪಿಡಿಒ ಅಬೂಬಕ್ಕರ್ ತಿಳಿಸಿದರು.

By Suddi9

Leave a Reply

Your email address will not be published. Required fields are marked *