ಬಂಟ್ವಾಳ : ಮೊನ್ನೆ ನಡೆದ ಚುನಾವಣೆ ಫಲಿತಾಂಶದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು 3 ಸ್ಥಾನದಿಂದ 76ಸ್ಥಾನಗಳಿಗೆ ಬಲ ವೃದ್ಧಿಸಿಕೊಂಡಿರುವುದರಿಂದ ವಿಚಲಿತರಾದ ತೃಣಮೂಲ ಕಾಂಗ್ರೆಸ್ ನ ಕಾರ್ಯಕರ್ತರು ಕಾನೂನನ್ನು ಗಾಳಿಗೆ ತೂರಿ ಸಾವಿರಾರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಅಂಗಡಿಗಳಿಗೆ ನುಗ್ಗಿ ದಾಂದಲೆ ನಡೆಸಿ ಅನೇಕ ಮಂದಿಯನ್ನು ಕೊಂದು ನೂರಾರು ಮಂದಿಯನ್ನು ಗಾಯಗೊಳಿಸಿ ರಾಕ್ಷಸಿ ಪ್ರವೃತ್ತಿ ತೂರಿಸುವುದನ್ನು ಖಂಡಿಸಿ ಬಿ ಸಿ ರೋಡಿನಲ್ಲಿ ಸಾಂಕೇತಿಕ ಪ್ರತಿಭಟನಾ ಧರಣಿ ನಡೆಸಲಾಯಿತು.WhatsApp Image 2021-05-05 at 12.40.38 PM (1)ಈ ಧರಣಿಯ ನೇತೃತ್ವವನ್ನು ಬಂಟ್ವಾಳ ಮಂಡಳದ ಅಧ್ಯಕ್ಷರಾದ ದೇವಪ್ಪ ಪೂಜಾರಿ ಅವರು ವಹಿಸಿಕೊಂಡಿದ್ದರು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್ ರವರು ಭಾಗವಹಿಸಿ ಟಿಎಂಸಿ ಪಕ್ಷದ ಗೂಂಡಾ ನಡೆಯನ್ನು ಖಂಡಿಸಿ ಮಮತಾ ಬ್ಯಾನರ್ಜಿಯವರ ಪ್ರಜಾಪ್ರಭುತ್ವ ವಿರೋಧಿ ನೀತಿ ಮತ್ತು ರಾಕ್ಷಸಿ ಪ್ರವೃತ್ತಿ ಯಿಂದ ಪಶ್ಚಿಮ ಬಂಗಾಲದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಹೇಳಿದರು .ಈ ಪ್ರತಿಭಟನಾ ಧರಣಿಯಲ್ಲಿ ಬಂಟ್ವಾಳ ಮಂಡಲದ ಪದಾಧಿಕಾರಿಗಳು ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಮತ್ತು ಪಕ್ಷದ ಪ್ರಮುಖರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದರು

By Suddi9

Leave a Reply

Your email address will not be published. Required fields are marked *