ಮುಂಬಯಿ : ಬಿಲ್ಲವರ ಸೇವಾ ಸಂಸ್ಥೆ ನಾಸಿಕ್ ಇದರ ಮಹಿಳಾ ವಿಭಾಗದ ಸಕ್ರೀಯ ಕಾರ್ಯಕರ್ತೆ ಮಮತಾ ದಾಮೋದರ್ ಪೂಜಾರಿ (೪೮.) ಅಲ್ಪಕಾಲದ ಅನಾರೋಗ್ಯದಿಂದ ಎ..೨೦ ರಂದು  ಮಂಗಳವಾರ  ನಾಸಿಕ್‌ನ ಆಸ್ಪತ್ರೆಯಲ್ಲಿ ನಿಧನರಾದರು.Mamata Nashik (A)ರಿಲಾಯನ್ಸ್ ಜಿಯೋ ಇನ್ಫೊಕಾಂ ಉದ್ಯೋಗಿ, ಬಿಲ್ಲವರ ಸೇವಾ ಸಂಸ್ಥೆ ನಾಸಿಕ್ ಇದರ ಕೋಶಾಧಿಕಾರಿ ದಾಮೋದರ್ ಪೂಜಾರಿ (ಅಳಿಕೆ) ಇವರ ಧರ್ಮಪತ್ನಿ ಆಗಿದ್ದು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದರು.Mamata Nashik (B)ಮೃತರು ಪತಿ, ಒಂದು ಹೆಣ್ಣು, ಒಂದು ಗಂಡು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಮಮತಾ ಪೂಜಾರಿ ನಿಧನಕ್ಕೆ ಬಿಲ್ಲವರ ಸೇವಾ ಸಂಸ್ಥೆ ನಾಸಿಕ್ ಇದರ ಅಧ್ಯಕ್ಷ ಗಂಗಾಧರ್ ಕೆ.ಅಮೀನ್, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಹಾಗೂ ಸರ್ವ ಸದಸ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ದಾಮೋದರ್ ಪೂಜಾರಿ ಪರಿವಾರಕ್ಕೆ ಸಾಂತ್ವನ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *