ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಹೆಣ್ಣೂರುಪದವು ಮೈದಾನದಲ್ಲಿ ಬೆಂಕಿನಾಥೇಶ್ವರ ಮೇಳದಿಂದ ‘ಮಹಿಮೆದ ಮಂತ್ರದೇವತೆ’ ಯಕ್ಷಗಾನ ಬಯಲಾಟ ಮಂಗಳವಾರ ರಾತ್ರಿ ಪ್ರದರ್ಶನಗೊಂಡಿತು. ಇಲ್ಲಿನ ಸಿದ್ಧಕಟ್ಟೆ ಸಮೀಪದ ಹೆಣ್ಣೂರುಪದವು ಭಗವತಿ ಸೇವಾ ಸಂಘದ ವತಿಯಿಂದ ಹೆಣ್ಣೂರುಪದವು ಮೈದಾನದಲ್ಲಿ ಬಾಳ ಕಳವಾರು ಬೆಂಕಿನಾಥೇಶ್ವರ ಮೇಳದಿಂದ ‘ಮಹಿಮೆದ ಮಂತ್ರದೇವತೆ’ ಎಂಬ ೨೦೦೦ನೇ ಯಶಸ್ವಿ ಯಕ್ಷಗಾನ ಬಯಲಾಟ ಮಂಗಳವಾರ ರಾತ್ರಿ ಪ್ರದರ್ಶನಗೊಂಡಿತು.
ಇದೇ ವೇಳೆ ಹಿರಿಯ ಕಲಾವಿದ ಬೋಳಾರ ಸುಬ್ಬಯ್ಯ ಶೆಟ್ಟಿ ಮತ್ತು ಪ್ರಸಂಗಕರ್ತ ವಿಜಿತ್ ಶೆಟ್ಟಿ ಆಕಾಶಭವನ ಇವರನ್ನು ಸನ್ಮಾನಿಸಲಾಯಿತು. ಮೇಳದ ವ್ಯವಸ್ಥಾಪಕ ಸುರೇಂದ್ರ ಮಲ್ಲಿ, ವಕೀಲ ಸುರೇಶ ಶೆಟ್ಟಿ ಶುಭ ಹಾರೈಸಿದರು. ಸಮಿತಿ ಗೌರವಾಧ್ಯಕ್ಷ ವಸಂತ ಶಾಂತಿ, ಅಧ್ಯಕ್ಷ ರಮೇಶ ಪೂಜಾರಿ ಹೊಸಮನೆ, ಮಹಿಳಾ ಸಮಿತಿ ಗೌರವಾಧ್ಯಕ್ಷೆ ಲಲಿತ ಡೀಕಯ್ಯ ಪೂಜಾರಿ, ಅಧ್ಯಕ್ಷೆ ರತ್ನಾ ಹೆಣ್ಣೂರುಪದವು, ರಾಜೇಶ ಪೂಜಾರಿ ಮತ್ತಿತರರು ಇದ್ದರು. ರುದೇಶ್ ಕರ್ಪೆ ಸ್ವಾಗತಿಸಿ, ವಂದಿಸಿದರು.
