ಬಂಟ್ವಾಳ : ಪುಂಜಾಲಕಟ್ಟೆ ಎ.೨೦: ಇಲ್ಲಿನ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ವರ್ಷಂಪ್ರತಿ ಕೊಡಮಾಡುವ ಸ್ವಸ್ತಿಸಿರಿ ರಾಜ್ಯಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದ್ದು, ಎ.೨೫ ರಂದು ಭಾನುವಾರ ವಪುಂಜಾಲಕಟ್ಟೆಯಲ್ಲಿ ಜರಗಲಿರುವ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕ್ಲಬ್ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ತಿಳಿಸಿದ್ದಾರೆ.
ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ: ಪಾಣಿಲ ಬಾಡ ಪೂಜಾರಿ(ಕಂಬಳ), ಕಾಂತಿ ಶೆಟ್ಟಿ (ಸಮಾಜಸೇವೆ) ನಿತ್ಯಾನಂದ ಪೂಜಾರಿ ಕೆಂತಲೆ(ಉದ್ಯಮ) ಸದಾಶಿವ ಡಿ.ತುಂಬೆ (ಸಾಂಸ್ಕೃತಿಕ) ಅವರು ಆಯ್ಕೆಯಾಗಿದ್ದಾರೆ.
ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ: ಸುಧಾಕರ ಸಾಲ್ಯಾನ್(ಸಮಾಜಸೇವೆ), ಜಾಕೋಬ್ ಮೋರಾಸ್(ನಾಟಿ ವೈದ್ಯ), ರಾಜೀವ ಶೆಟ್ಟಿ ಎಡ್ತೂರು(ಕಂಬಳ), ರಮಾನಂದ ನೂಜಿಪ್ಪಾಡಿ(ಶಿಕ್ಷಣ), ಕ್ಷಿತಿ ಕೆ.ರೈ,(ಕಲೆ) ಯಕ್ಷಚಿಗುರು ಕಲಾ ತಂಡ ಅಜಿಲಮೊಗರು(ಸಂಘಟನೆ). 

