ಮುಂಬಯಿ :  ಕೋವಿಡ್ ೧೯ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಜೀವನೋಪಾಯವನ್ನೇ ಚಲನಾವೃತ್ತಿಯನ್ನು ಅವಲಂಬಿಸಿ ಕೊಂಡಿದ್ದು, ಸದ್ಯ ದಿನ ಬಾಡಿಗೆಯು ತೀವ್ರಗತಿಯಲ್ಲಿ ಕ್ಷಿಣಿಸಿದ ಪರಿಣಾಮ ದೈನಂದಿನಾ ಸಂಪಾದನಾ ನಷ್ಟವನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಮೆಜಾನ್ ಸಂಸ್ಥೆಯು ತಮ್ಮ ಸಂಸ್ಥೆಯಲ್ಲಿ ಮುಂಬಯಿ ಮತ್ತು ಉಪನಗರಗಳಲ್ಲಿನ ಆಟೋ ರಿಕ್ಷಾ ಯಾ ಟ್ಯಾಕ್ಸಿ ಚಾಲಕರುನ್ನು ಬಳಸಿ ತಮ್ಮ ಗ್ರಾಹಕರಿಗೆ ವಸ್ತುಗಳನ್ನು ತಲುಪಿಸುವಲ್ಲಿ ಅವಕಾಶ ಒದಗಿಸುವಂತೆ ಅಮೆಜಾನ್ ಜಾಗತಿಕ ಹಿರಿಯ ಉಪಾಧ್ಯಕ್ಷ, ಅಮೆಜಾನ್ (ಭಾರತ) ವ್ಯವಸ್ಥಾಪಕ ನಿರ್ದೇಶಕ ಅಮಿತ್ ಅಗರ್ವಾಲ್ ಇವರಿಗೆ ಅಂಧೇರಿ ಪಶ್ಚಿಮದ ಮಾಜಿ ಶಾಸಕ, ಹಾಲಿ ಶಿವಸೇನೆ ಪಕ್ಷದ ಧುರೀಣ, ಮುಂಬಯಿ ಉಪನಗರಗಳಲ್ಲಿನ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಡ್ರೈವರ್‌ಗಳ ಒಕ್ಕೂಟ ಆಗಿರುವ ಕಾಮ್ಗಾರ್ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಎಸ್.ಹೆಗ್ಡೆ ಮನವಿ ಮಾಡಿದ್ದಾರೆ.Krishna Hegde-xಅಮೆಜಾನ್ ಸಂಸ್ಥೆ ಪ್ರಸ್ತುತ ಜಾಗತಿಕವಾಗಿ ಪಸರಿಸಿದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದ್ದು, ವಿಶ್ವದ ಅತಿದೊಡ್ಡ ಲಾಜಿಸ್ಟಿಕ್ ಮತ್ತು ಮಾನವಶಕ್ತಿ ತೊಡಗಿಸಿಕೊಳ್ಳುವ ಕಂಪನಿಯೂ ಹೌದು. ಆದ್ದರಿಂದ ಮುಂಬಯಿ ಮತ್ತು ಉಪನಗರಗಳಲ್ಲಿನ ಆಟೋ ರಿಕ್ಷಾ ಯಾ ಟ್ಯಾಕ್ಸಿ ಚಾಲಕರು ಸೇವೆಯನ್ನು ತಮ್ಮ ಸಂಸ್ಥೆಯಲ್ಲಿ ತೊಡಗಿಸಿ ಕೊಂಡು ತಮ್ಮ ಉತ್ಪನ್ನಗಳನ್ನು ತಲುಪಿಸಲು ಅಮೆಜಾನ್ ಗಮನ ಹರಿಸಿದರೆ ಈ ಚಾಲಕರಿಗೆ ಒಪ್ಪೊತ್ತಿನ ಊಟದ ಗಳಿಕೆಯನ್ನು ಮಾಡುತ್ತಾ ತಮ್ಮ ಸಂಸಾರ ನಡೆಸಲು ಆಧಾರವಾಗಬಲ್ಲದು.

ಚಾಲಕರು ದೊಡ್ಡ ಪ್ರಮಾಣದ ಮತ್ತು ಬೃಹತ್ ಉತ್ಪನ್ನಗಳನ್ನು ಸಹ ತಲುಪಿಸಬಹುದು. ಈ ಚಾಲಕÀರು ತಮ್ಮ ಕಂಪನಿಗೆ ಸಮಯೋಚಿತ, ವೇಗದ, ವಿಶ್ವಾಸಾರ್ಹ ಕೆಲಸ ಪ್ರಾಮಾಣಿಕ ಮತ್ತು ನಿಷ್ಠಾವಂತರಾಗಿ ಮಾಡುವೆ ಭರವಸೆ ನಾವು ತಮಗೆ ನೀಡಬಲ್ಲೆ. ಇದು ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಈ ಕಷ್ಟದ ಸಮಯದಲ್ಲಿ ಸ್ವಲ್ಪ ಆದಾಯವನ್ನು ಗಳಿಸಲು ಸಹಕಾರಿ ಆಗಬಲ್ಲದು. ಇದು ತಮ್ಮ ಉದ್ಯಮದ ಸಿಎಸ್‌ಆರ್ ಸೇವೆಯ ಉದ್ದೇಶವನ್ನೂ ಪೂರೈಸಿದಂತಾಗಬಹುದು ಎಂದೂ ಪತ್ರದ ಮೂಲಕ ಕೃಷ್ಣ ಹೆಗ್ಡೆ ಮನವಿ ಮಾಡಿದ್ದಾರೆ.

By Suddi9

Leave a Reply

Your email address will not be published. Required fields are marked *