ಕೈಕಂಬ :ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಮಾಡ್ಲಾಯ ದೈವಸ್ಥಾನದ ವಾರ್ಷಿಕ ನೇಮವು ಎ.೧೪ರಂದು ಬುಧವಾರ ನಡೆಯಿತು.
ಮಾಡ್ಲಾಯ ದೈವಸ್ಥಾನದ ಭೂತರಾಜ ಹಾಗೂ ಮಾಡ್ಲಾಯ ದೈವದ ನೇಮವು ವಿಜೃಂಭಣೆಯಿಂದ ನಡೆಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಘು ಎಲ್ ಶೆಟ್ಟಿ, ಕಾವೇಶ್ವರ ದೇವಸ್ಥಾನದ ಅರ್ಚಕ ಪ್ರಕಾಶ್ ಭಟ್, ಬೆಳ್ಳೂರು ಗುತ್ತುಕೃಷ್ಣ ಪ್ರಸಾದ್ ರೈ , ಉಮೇಶ್ ಶೆಟ್ಟಿ, ಸಚ್ಚೀಂದ್ರನಾಥ್ ಭಂಡಾರಿ, ಮೋಹನ್ ದಾಸ್ ಮೇಲಾಂಟ, ಕರುಣಾಕರ ಶೆಟ್ಟಿ, ಸೀತಾರಾಮ ಪೂಂಜ, ದೇವಪ್ಪ ಪೂಜಾರಿ ಬಾಳಿಕೆ, ಜಯರಾಮ ಶೆಟ್ಟಿ ದಾಸಕೋಡಿ, ಚಂದ್ರಶೇಖರ ಅಜಿಲ ,ನಂದರಾಮ ರೈ ಮತ್ತಿತರರು ಉಪಸ್ಥಿತರಿದ್ದರು.



