ಬಂಟ್ವಾಳ: ಇಲ್ಲಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ದೇವ್ ಇವರ ಬಲಿದಾನ ಪ್ರಯುಕ್ತ ಬಿ.ಸಿ.ರೋಡು ರಾಷ್ಟ್ರೀ ಯ ಹೆದ್ದಾರಿಯಲ್ಲಿ ಮಂಗಳವಾರ ಕಾಲ್ನಡಿಗೆ ಜಾಥಾ ನಡೆಯಿತು.
ವಕೀಲ ಪ್ರಸಾದ್ಕುಮಾರ್ ರೈ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಅರ್ಪಿಸಿದ ಭಗತ್ ಸಿಂಗ್ನ ರಕ್ತದಲ್ಲಿಯೇ ಸ್ವಾತಂತ್ರ್ಯ ದೇವಿ ಸೃಷ್ಟಿಯಾಗಿದೆ. ಜಲಿಯನ್ ವಾಲಾಬಾಗ್ ದುರಂತ ಆತನಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಿದೆ ಎಂದು ಹೇಳಿದರು.ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ವಿಶೇಷ ಅಧಿಕಾರಿ ದೇವಿಪ್ರಸಾದ್ ಮಾತನಾಡಿ, ನಾವು ಕೂಡ ದೇಶಕ್ಕೆ ಸೇವೆ ನೀಡಲು ಸಂಕಲ್ಪ ಕೈಗೊಳ್ಳಬೇಕಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ. ನಾರಾಯಣ ಭಂಡಾರಿ, ಎಬಿವಿಪಿ ಜಿಲ್ಲಾ ಸಂಚಾಲಕ ಹರ್ಷಿತ್ ಕೊಯಿಲ, ತಾಲ್ಲೂಕು ಸಂಚಾಲಕ ಅಖಿಲೇಶ್, ವಿಭಾಗ ಸಂಚಾಲಕ ಸಂದೇಶ್ ರೈ ಮಜಕ್ಕಾರು, ಗುರುಪ್ರಸಾದ್ ಸಿದ್ದಕಟ್ಟೆ, ದಿನೇಶ್ ಕೊಯಿಲ, ಪ್ರಜ್ವಲ್ ಸಿದ್ದಕಟ್ಟೆ ಮತ್ತಿತರರು ಇದ್ದರು.
