ಮೂಡುಬಿದಿರೆ: ಜೈನ್ ಪೇಟೆ ನಿವಾಸಿ, ನಿವೃತ್ತ ಶಿಕ್ಷಕ ಸುಕುಮಾರ ಇಂದ್ರ (71) ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನ ಹೊಂದಿದರು.
ಅವರು ಪತ್ನಿ ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಮೂಡುಬಿದಿರೆ ವಲಯದ ಥರ್ಡ್‍ಶಾಲೆ, ಕಲ್ಲಬೆಟ್ಟು, ನಡ್ಯೋಡಿ, ಪೆರಿಬೆಟ್ಟು ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ಹಾಗೂ ಮುಖ್ಯ ಶಿಕ್ಷಕರಾಗಿ ಅವರು ಮೂರುವರೆ ದಶಕಗಳಿಗೂ ಅಧಿಕ ಸೇವೆ ಸಲ್ಲಿಸಿದ್ದರು. ಶೆಟ್ಟರ ಬಸದಿಯ ಇಂದ್ರ ಮನೆತನದವಾರಿ ಬಸದಿಯ ಪೂಜಾದಿಗಳನ್ನು ನಡೆಸಿಕೊಂಡು ಬಂದಿದ್ದರು.
