ಬಂಟ್ವಾಳ:ಸಮಾಜದ ಶಕ್ತಿಯಾಗಿರುವ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಇರುವ ಸಾಕಷ್ಟು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜೇಸಿರೆಟ್ ಅಧ್ಯಕ್ಷೆ ವಿದ್ಯಾ ಉಮೇಶ್ ಮೂಲ್ಯ ಹೇಳಿದ್ದಾರೆ.ಇಲ್ಲಿನ ಕುಕ್ಕಿಪಾಡಿ ಗ್ರಾಮ ಪಂಚಾಯಿತಿನಲ್ಲಿ ಜೆಸಿಐ ಬಂಟ್ವಾಳ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ರಾಜು ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿಯ ಗೆಳತಿ ವಿಭಾಗದ ಆಪ್ತ ಸಮಾಲೋಚಕಿ ಚೈತನ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಜೆಸಿಐ ಅಧ್ಯಕ್ಷ ಉಮೇಶ್ ಆರ್. ಮೂಲ್ಯ, ಪಿಡಿಒ ತುಳಸಿ, ಜೆಸಿರೆಟ್ ಸದಸ್ಯೆ ರಶ್ಮಿ ಶೆಟ್ಟಿ, ಪ್ರಮುಖರಾದ ಕೋಮಲ, ಪ್ರತಿಭಾ, ವನಿತಾ, ಪುಷ್ಪಾ, ರೋಷನ್ ರೈ, ರವೀಂದ್ರ ಬಂಗೇರ, ಸದಾನಂದ ಬಂಗೇರ, ಸಂತೋಷ್ ಜೈನ್, ಕಾರ್ತಿಕ್ ರೈ, ದೀಪ್ತಿ ಆರ್. ರೈ ಇದ್ದರು. ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ ಸ್ವಾಗತಿಸಿ, ವಂದಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಸಪ್ನಾ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಹೇಮಲತಾ, ಅಂಗನವಾಡಿ ಕಾರ್ಯಕರ್ತೆ ಕುಸುಮಾವತಿ ಜೆ. ಶೆಟ್ಟಿ ಸಹಕರಿಸಿದರು.
