ಬಂಟ್ವಾಳ: ಸಮಾಜದಲ್ಲಿ ಎಲ್ಲಾ ರೀತಿಯ ಭಕ್ತರು ಒಟ್ಟಾಗಿ ಧಾಮಿ೯ಕ ಕ್ಷೇತ್ರಗಳ ಅಭಿವೖದ್ಧಿ ಗೆ ಸ್ಪಂದಿಸುವುದರ ಜೊತೆಗೆ ಸ್ವಯಂ ಆತ್ಮ ಶುದ್ಧೀಕರಣಗೊಳಿಸುವ ಅಗತ್ಯವಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಇಲ್ಲಿನ ಅಜ್ಜಿಬೆಟ್ಟು ಗ್ರಾಮದ ಇತಿಹಾಸ ಪ್ರಸಿದ್ಧ ಪದವು ಶ್ರೀ ದುಗಾ೯ಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ನಡೆದ ಧಾಮಿ೯ಕ ಸಭೆಯಲ್ಲಿ ಅವರು ಮಾತನಾಡಿದರು.

12988771-8daf-4eec-a1dd-d77f08a176feಒಡಿಯೂರು ಕ್ಷೇತ್ರದ ಸಾಧ್ವಿ ಮಾತಾನಂದಮಯಿ ಆಶೀವ೯ಚನ ನೀಡಿ, ಪರಿಶುದ್ಧ ಭಕ್ತಿಗೆ ಮಹಾ ತಾಯಿ ದುಗಾ೯ಪರಮೇಶ್ವರಿ ಸುಲಭವಾಗಿ ಒಲಿಯುತ್ತಾರೆ ಎಂದರು. ಕಟೀಲು ಕ್ಷೇತ್ರದ ಹರಿನಾರಾಯಣ ಅಸ್ರಣ್ಣ ಮಾತನಾಡಿ, ದೇವರ ಆರಾಧನೆಯಿಂದ ಜನ್ಮ ಪಾವನವಾಗುತ್ತದೆ ಎಂದರು. ಮಾಜಿ ಸಚಿವ ಕೖಷ್ಣ ಜೆ.ಪಾಲೆಮಾರ್, ಹೖದಯ ತಜ್ಞ ಡಾ.ತುಷಾರ್ ಜಿ.ಧೋಪಡೆ, ಮಂಗ್ಲಿಮಾರ್ ಕ್ಷೇತ್ರದ ಆಡಳಿತ ಧಮ೯ದಶಿ೯ ರವಿಶಂಕರ ಶೆಟ್ಟಿ ಬಡಾಜೆಗುತ್ತು, ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ಶುಭ ಹಾರೈಸಿದರು.

ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಬೇಬಿ ಕುಂದರ್, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್, ಹೊಕ್ಕಾಡಿಗೋಳಿ ಕಂಬಳ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಕಕ್ಯಪದವು ಗರಡಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಜೀಣೋ೯ದ್ಧಾರ ಸಮಿತಿ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಆಡಳಿತಾಧಿಕಾರಿ ಯಮುನಪ್ಪ ಕೊರವರ, ಗೌರವ ಸಲಹೆಗಾರ ಶ್ರೀಪತಿ ಭಟ್ ಮೂಡುಬಿದ್ರೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಬುಳೇರಿ, ಕಾಯಾ೯ಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು, ಪ್ರಧಾನ ಕಾಯ೯ದಶಿ೯ ಯೋಗೀಶ ಕಲಸಡ್ಕ, ಎ.ಗೋಪಾಲ ಅಂಚನ್ ಆಲದಪದವು, ಬೆಂಗಳೂರು ಸಮಿತಿ ಅಧ್ಯಕ್ಷ ಮೋಹನದಾಸ್ ಶೆಟ್ಟಿ, ಸುಲೋಚನಾ ಜಿ.ಕೆ.ಭಟ್, ಉದ್ಯಮಿ ಶಾಂತರಾಮ ಶೆಟ್ಟಿ, ಸಿ.ಎ. ಪುರುಷೋತ್ತಮ ಶೆಟ್ಟಿ, ಗ್ರಾ.ಪಂ.ಅಧ್ಯಕ್ಷೆ ಭಾರತಿ ರಾಜೇಂದ್ರ ಪೂಜಾರಿ, ಎಂ.ಎಸ್.ಶೇಖರ್ ಇವ೯ತ್ತೂರು, ಹಷಿ೯ಣಿ ಪುಷ್ಪಾನಂದ ಪಿಲಾತಬೆಟ್ಟು, ಅನಂತಪದ್ಮನಾಭ ಮತ್ತಿತರರು ಇದ್ದರು.ಮುಂಬೈ ಸಮಿತಿ ಅಧ್ಯಕ್ಷ ಅಶೋಕ ಪಕ್ಕಳ ಸ್ವಾಗತಿಸಿ, ಶಿಕ್ಷಕ ಉದಯಕುಮಾರ್ ಶೆಟ್ಟಿ ವಂದಿಸಿದರು. ಕಲಾವಿದ ಎಚ್ಕೆ ನಯನಾಡು, ಮಲ್ಲಿಕಾ ಎ.ಶೆಟ್ಟಿ ನಿರೂಪಿಸಿದರು.
ಇದೇ ವೇಳೆ ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿ ಮಾಗ೯ದಶ೯ನದಲ್ಲಿ ಶ್ರೀ ದುಗಾ೯ಪರಮೇಶ್ವರಿ ದೇವಿಗೆ ಬ್ರಹ್ಮಕಲಶೋತ್ಸವ, ಗಣಪತಿ, ಶಾಸ್ತಾರ , ನಾಗದೇವರು ಮತ್ತು ಪರಿವಾರ ದೈವಗಳಿಗೆ ಕಲಶಾಭಿಷೇಕ, ದೇವರ ಬಲಿ ಉತ್ಸವ ನೆರವೇರಿತು.

By suddi9

Leave a Reply

Your email address will not be published. Required fields are marked *