ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಏಕರೂಪದ ತಂತ್ರಾಂಶ ಅಳವಡಿಕೆಗೆ ಚಾಲನೆಯೊಂದಿಗೆ.ಹೊಸ ಘನ ವಾಹನದ ಸಾಲ ಪತ್ರ ವಿತರಣೆ ಹಾಗೂ ನವೋದಯ ಸದಸ್ಯರಿಗೆ ಚೈತನ್ಯ ವಿಮೆ ಹಾಗೂ ಶೀಘ್ರ ಸಾಲ ಪತ್ರದ ವಿತರಣೆಯ ಕಾರ್ಯಕ್ರಮವು ಸಹಕಾರಿ ಬ್ಯಾಂಕಿನ ಪ್ರಧಾನ ಕಛೇರಿಯ ಸಂಭಾಗಣದಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಬೆಳ್ಳಿ ಪ್ರಕಾಶರವರು ಏಕರೂಪದ ತಂತ್ರಾಂಶ ಅಳವಡಿಕೆಗೆ ಚಾಲನೆ ನೀಡಿದರು.ಇನ್ನೂ ಬ್ಯಾಂಕ್ ನ ಮುಖ್ಯ ಮಹಾಪ್ರಬಂಧಕರಾದ ನೀರಾಜ್ ಕುಮಾರ ವರ್ಮ ರವರು ಹೊಸ ಎಟಿಎಂ ಉದ್ಘಾಟನೆ ಮಾಡುವುದರೊಂದಿಗೆ ನವೋದಯ ಸದ್ಯಸರಿಗೆ ಚೈತನ್ಯ ವಿಮೆ ಹಾಗೂ ಶೀಘ್ರ ಸಾಲದ ಪತ್ರದ ವಿತರಣೆಯನ್ನ ಮಾಡಿದರು.
ಇನ್ನೂ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ|| ಎಂ.ಎನ್ ರಾಜೇಂದ್ರ ಕುಮಾರ ಹಾಗೂ ಬ್ಯಾಂಕ್ ನ ಉಪಾಧ್ಯಕ್ಷರು ವಿನಯ ಕುಮಾರ್ ಸೂರಿಂಜೆ.ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಂದ್ರ.ಬಿ.ಇನ್ನಿತರರು ಉಪಸ್ಥಿತಿಯಿದ್ದರು
