ಕೈಕಂಬ:ಮನುಷ್ಯನ ಜೀವನಕ್ಕೆ ಗಾಳಿ, ನೀರು, ಆಹಾರ ಅತಿ ಅಗತ್ಯವಾಗಿದ್ದು, ಪ್ರಸ್ತುತ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುಮಿಕ ಘಟಕ ಆರಂಭಗೊಂಡ ಸಂಸ್ಥೇಗೆ ಆಗಮಿಸಿದ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತಾನ್ಯಂದ ಸ್ವಾಮೀಜಿ ಆಶೀರ್ವಚನ ನೀಡಿ, ಈ ಘಟಕವು ಉತ್ತಮ ರೀತಿಯಲ್ಲಿ ಲಾಭ ಗಳಿಸುವ ಜತೆಗೆ ಜನರಿಗೆ ಸೇವೆ ನೀಡುವಂತಾಗಲಿ ಎಂದು ಹಾರೈಸಿದರು.24vp goodyu 5

ಅವರು ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಕರಿಯಂಗಳದಲ್ಲಿ ಅನುಷ್ಠಾನಗೊಂಡ ಸಂಗಮ್ ಮಿನರಲ್ಸ್ ಹಾಗೂ ಬೆವರೇಜಸ್‌ನವರ ಗುಡ್‌ಡ್ಯೂ ಶುದ್ಧ ಕುಡಿಯುವ ನೀರಿನ ಘಟಕ ದ ಉದ್ಘಾಟನೆಗೆ ಆಗಮಿಸಿ ಆಶೀರ್ವಚನ ನೀಡಿ ಮಾತನಾಡಿದರು.gooddew vp24-1
ಕಾರ್ಯಕ್ರಮದಲ್ಲಿ ಘಟಕವನ್ನು ಉದ್ಘಾಟಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರ ಅವಶ್ಯಕತೆಯಾಗಿದ್ದು, ಆದರೆ ಪ್ರಕೃತಿಯ ಅಸಮತೋಲನ ಸ್ಥಿತಿಯಿಂದ ನೀರು ಕಲುಷಿತಗೊಂಡಿದೆ. ಹೀಗಾಗಿ ಇಂತಹ ಘಟಕ ಇಂದಿನ ಅವಶ್ಯಕತೆಯಾಗಿದ್ದು, ಇದು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು.24vp goodyu1

ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಹಾಗೂ ತಾ.ಪಂ.ಸದಸ್ಯ ಯಶವಂತ ಪೊಳಲಿ ಅವರು ಶುಭಹಾರೈಸಿ, ಗ್ರಾಮೀಣ ಪ್ರದೇಶದಲ್ಲಿ ಶ್ರಮ ಮತ್ತು ಸಾಧನೆಯಿಂದ ಯುವಕರಿಬ್ಬರು ಇಂತಹ ಸಂಸ್ಥೆ ಅನುಷ್ಠಾನಿಸಿದ್ದು, ಇದರಿಂದ ಉದ್ಯೋಗ ಸೃಷ್ಟಿಯ ಮೂಲಕ ಸಮಾಜಕ್ಕೆ ಬೆಳಕಾಗಲಿ ಎಂದರು.24vp good dyu

ವೇದಿಕೆಯಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಉದ್ಯಮಿ ಉಮೇಶ್ ಆಚಾರ್ಯ, ಚಿತ್ರನಟಿ ಸಪ್ತ ಪಾವೂರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರವರ್ತಕರಾದ ಚಂದ್ರಹಾಸ್ ಪಲ್ಲಿಪಾಡಿ ಹಾಗೂ ಪ್ರಸಾದ್ ಗರೋಡಿ ಅವರು ಸಂಸ್ಥೆಯ ಕುರಿತು ವಿವರಿಸಿ ಎಲ್ಲರ ಸಹಕಾರ ಕೋರಿದರು.24vp goodyu3
ಚಂದ್ರಶೇಖರ ಮಂಗಳಾದೇವಿ ಅವರ ತಂಡದಿಂದ ಆರ್ಕೇಸ್ಟ್ರಾ ನಡೆಸಿಕೊಟ್ಟರು. ಶ್ರೀ ವಿಠೋಭ ಬಾಲ ಭಜನಾ ಮಂದಿರ ಪಲ್ಲಿಪಾಡಿ ಕರಿಯಂಗಳ ಇಲ್ಲಿಯ ಸದಸ್ಯರಿಂದ ಭಜನೆ ಕಾರ್ಯಕ್ರಮ ನಡೆಯಿತು. ಚಂದ್ರಹಾಶ ಪಲ್ಲಿಪಾಡಿ ಸ್ವಾಗತಿಸಿ ಮನೋಜ್ ವಾಮಂಜೂರು ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *