ಬ್ರಹ್ಮಾವರ: ಗೋವಿಗಾಗಿ ಮೇವು ಅಭಿಯಾನವು ಉಡುಪಿ ಜಿಲ್ಲೆಯಲ್ಲದೆ ಚಿಕ್ಕ ಮಗಳೂರು ಜಿಲ್ಲೆಯಲ್ಲಿಯೂ ಯಶಸ್ವಿಯಾಗಿರುವುದು ಅಭಿನಂದನೀಯ , ಗೋವಿಗೆ ಪ್ರತಿಯೊಬ್ಬರೂ ಗೋಗ್ರಾಸ ನೀಡಿದರೆ ಅದು ಪುಣ್ಯ ಸಂಪಾದನೆಯ ಕೆಲಸವಾಗುತ್ತದೆ. ಪ್ರತಿ ಗ್ರಾಮದಲ್ಲಿ ಗೋ ಶಾಲೆ ಪ್ರಾರಂಭವಾದರೆ ದನಗಳ ಸಂತತಿ ಮುಂದಿನ ದಿನಗಳಲ್ಲಿ ಉಳಿಸಬಹುದಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀಥ೯ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

ಅವರು ನ.15ರಂದು ನೀಲಾವರ ಗೋ ಶಾಲೆಯಲ್ಲಿ ನಡೆದ ಗೋ ಪೂಜೆ ಹಾಗೂ ಗೋವಿಗಾಗಿ ಮೇವು ಅಭಿಯಾನದಡಿ ಒಣ ಹುಲ್ಲು ಅಭಿಯಾನಕ್ಕೆ ಚಾಲನೆ ನೀಡಿದರು.ಮಂದಾತಿ೯ ಕಾಮಧೇನು ಗೋ ಸೇವಾ ಬಳಗ ವತಿಯಿಂದ ಹಾಗೂ ಕರಂಬಳ್ಳಿ ಯುವಕ ಮಂಡಲ ವತಿಯಿಂದ ನಡೆದ ಈ ಕಾಯ೯ಕ್ರಮದಲ್ಲಿ ಅಭಿಯಾನದ ಪ್ರಮುಖರಾದ ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿ ಅಭಿಯಾನ ನಡೆದು ಬಂದ ಹಾದಿಯನ್ನು ತಿಳಿಸಿದರು.ಮುಂದಿನ ದಿನಗಳಲ್ಲಿ ಈ ಒಣ ಹುಲ್ಲು ನೀಡುವ ಕಾಯ೯ ಎಲ್ಲಾ ಸಂಘ ಸಂಸ್ಥೆಗಳ ವತಿಯಿಂದ ನಿರಂತರ ನಡೆಯಲಿದೆ ಎಂದರು.ಈ ಸಂದಭ೯ದಲ್ಲಿ ನಗರಸಭಾ ಸದಸ್ಯ ಕೆ. ಗಿರಿಧರ್ ಆಚಾಯ೯, ರಾಘವೇಂದ್ರ ಕವಾ೯ಲು ಸಂಘದ ಪ್ರಸನ್ನ ಶೆಟ್ಟಿ ಮುಂತಾದವರಿದ್ದರು.
