ಮೂಡುಬಿದಿರೆ: ಆರೋಗ್ಯ ವಿಜ್ಞಾನಗಳ ವೈದ್ಯ ಲೇಖಕಿಯಾಗಿ ಕನ್ನಡ ಸಾಹಿತ್ಯ ಹಾಗೂ ಆರೋಗ್ಯಕ್ಷೇತ್ರಕ್ಕೆ ಕೊಡುಗೆ ನೀಡಿರುವ ಆಳ್ವಾಸ್ ನ್ಯಾಚುರೋಪಥಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಪ್ರಾಧ್ಯಾಪಕಿ ಡಾ.ವೃಂದಾ ಬೇಡೆಕರ್ ಅವರನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಭರಣ ಅವರು ಡಾ.ವೃಂದಾ ಬೇಡೆಕರ್ ಅವರನ್ನು ಸನ್ಮಾನಿಸಿದರು.
ವೃಂದಾ ಅವರು ಆಳ್ವಾಸ್ ಪಿಯು ಕಾಲೇಜಿನ ಜೀವಶಾಸ್ತ್ರ ವಿಭಾಗದ ಉಪನ್ಯಾಸ ಯೋಗೀಶ್ ಬೇಡೆಜರ್ ಅವರ ಪತ್ನಿ.

By suddi9

Leave a Reply

Your email address will not be published. Required fields are marked *