ಮುಂಬಯಿ: ಗಾಯನ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕಾರ್ವಾಲ್ ಕುಟುಂಬ ಮತ್ತು ಮಾಂಡ್ ಸೊಭಾಣ್ ನೀಡುವ ೧೬ನೇ ಕಲಾಕಾರ್ ಪುರಸ್ಕಾರವು ಕೊಂಕಣಿ ಗಾಯಕಿ ಅನಿತಾ ಡಿಸೋಜ ಇವರಿಗೆ ಪ್ರಕಟಿಸಿದೆ.ಅನಿತಾ ಡಿಸೋಜ ಅವರು ಕೊಂಕಣಿ, ಕನ್ನಡ, ತುಳು, ಮಲಯಾಳಂ, ಇಂಗ್ಲೀಶ್, ಹಿಂದಿ, ಗುಜರಾತಿ, ತೆಲುಗು, ತಮಿಳು, ಮರಾಠಿ, ಅರಾಬಿಕ್ ಮತ್ತು ಬ್ಯಾರಿ ಹೀಗೆ ಹನ್ನೆರಡು ಭಾಷೆಗಳಲ್ಲಿ ಹಾಗೂ ನವಾಯತಿ ಭಾಷಾ ಪ್ರಬೇಧದಲ್ಲಿ ಹಾಡಿದ್ದಾರೆ. ವಿವಿಧ ಧ್ವನಿಸುರುಳಿಗಳಲ್ಲಿ ೫೦೦ಕ್ಕೂ ಮಿಕ್ಕಿ ಹಾಡುಗಳನ್ನು, ಭಾರತ ಮತ್ತು ಗಲ್ಫ್ ದೇಶಗಳ ೩೦೦೦ಕ್ಕೂ ಮಿಕ್ಕಿ ಕಾರ್ಯಕ್ರಮಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಕಂಠಸಿರಿಯನ್ನು ನೀಡಿದ್ದಾರೆ. ಯಾದ್ ಮತ್ತು ಕರ‍್ಸ್ ಧ್ವನಿಸುರುಳಿಗಳನ್ನು ಹೊರ ತಂದಿದ್ದಾರೆ.Anitha D'Souza-01

ಅವರ ಪ್ರತಿಭೆಗೆ ಕೇರಳ ಸರಕಾರದಿಂದ ಕಲಾತಿಲಕ, ಕರ್ನಾಟಕ ಬ್ಯಾರಿ ಅಕಾಡೆಮಿಯಿಂದ ತುಳುನಾಡ ಗಾನ ಕೋಗಿಲೆ (೨೦೦೬), ಕನ್ನಡ ಸಾಹಿತ್ಯ ಅಕಾಡೆಮಿಯಿಂದ ವಿಶ್ವ ಗಡಿನಾಡ ರಾಣಿ ಕೋಗಿಲೆ (೨೦೧೧), ಮಾಂಡ್ ಸೊಭಾಣ್ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ – ಶ್ರೇಷ್ಟ ಗಾಯಕಿ (೨೦೧೪) ಇತ್ಯಾದಿ ಗೌರವಗಳು ಲಭಿಸಿವೆ. ಮಂಗಳೂರುನ ಕುಳೂರು ಮೂಲದ ಅನಿತಾ ಡಿಸೊಜಾ ಬೇಳ ಪ್ರಸ್ತುತ ಅಬುಧಾಬಿಯಲ್ಲಿ ವಾಸವಿದ್ದು ಕೊಂಕಣಿ ಗಾಯನ ಕ್ಷೇತ್ರವನ್ನು ಶ್ರೀಮಂತಗೊಳಿಸಲು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಕೊಂಕಣಿಯ ನೃತ್ಯ, ನಾಟಕ, ಸಂಗೀತ-ಗಾಯನ, ಜನಪದ ಈ ಪ್ರಕಾರಗಳಲ್ಲಿ ಮಹತ್ವದ ಸಾಧನೆ ಮಾಡಿದ ಕರ್ನಾಟಕ ಮೂಲದ ಕಲಾವಿದರನ್ನು ಗೌರವಿಸಲು ಕೊಂಕಣಿ ವಿದ್ವಾಂಸ ವಂ| ಡಾ| ಪ್ರತಾಪ್ ನಾಯ್ಕ್ ತನ್ನ ಕಾರ್ವಾಲ್ ಕುಟುಂಬಸ್ಥರ ಪರವಾಗಿ ೨೦೦೫ರಲ್ಲಿ ಕಲಾಕಾರ್ ಪುರಸ್ಕಾರ ಸ್ಥಾಪಿಸಿದ್ದರು.Kalakar puroskar 2020

ಕೋವಿಡ್ ನಿಯಂತ್ರಣ ಕಾರಣಗಳಿಂದಾಗಿ ಈ ಕಾರ್ಯವು ಅಬುಧಾಬಿಯಲ್ಲಿ ನಡೆಯಲಿದ್ದು, ಅನಿವಾಸಿ ಉದ್ಯಮಿ ಲಿಯೊ ರಾಡ್ರಿಗಸ್ ಪುರಸ್ಕಾರ ಹಸ್ತಾಂತರ ಮಾಡಲಿದ್ದಾರೆ. ಈ ಕಾರ್ಯಕ್ರಮವು ಬರುವ ನ.೦೧ರ ಸಂಜೆ ೭.೦೦ ಗಂಟೆಗೆ ದಾಯ್ಜಿವರ್ಲ್ಡ್ ಟಿವಿಯಲ್ಲಿ ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ ೨೨೬ ನೇ ಕಾರ್ಯಕ್ರಮ `ಪುರ್ಣಾ ಪಾತೊಳಿ-೩’ ರಲ್ಲಿ ಪ್ರಸಾರವಾಗಲಿದೆ ಎಂದು ಮಾಂಡ್ ಸೊಭಾಣ್ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *