ಬಂಟ್ವಾಳ: ಯುವಕನೋರ್ವನನ್ನು ತಂಡವೊಂದು ಮಾರಕ ಅಸ್ತ್ರದಿಂದ ಕಡಿದು ಹತ್ಯೆ ನಡೆಸಿರುವ ಘಟನೆ ತಾಲೂಕಿನ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.ಕಲ್ಲಡ್ಕ ನಿವಾಸಿ ಉಮರ್ ಫಾರೂಕ್ ಯಾನೆ ಚೆನ್ನ ಫಾರೂಕ್ ಕೊಲೆಯಾದವರು.ಉಮರ್ ಫಾರೂಕ್ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳ ತಂಡ ತಲವಾರಿನಿಂದ ದಾಳಿ ನಡೆಸಿದ್ದು ಗಂಭೀರ ಗಾಯಗೊಂಡ ಉಮರ್ ಫಾರೂಕ್ ನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಉಮರ್ ಫಾರೂಕ್ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದು ರೌಡಿ ಶೀಟರ್ ಆಗಿದ್ದಾನೆ. ಈತನ ಸ್ನೇಹಿತರ ತಂಡವೇ ಕೊಲೆ ನಡೆಸಿದೆ ಎಂದು ಸಾರ್ವಜನಿಕರ ಆರೋಪ. ಮೂಲತಃ ಕಲ್ಲಡ್ಕದವನೇ ಆದ ಮತ್ತೋರ್ವ ರೌಡಿ ಶೀಟರ್ ಮತ್ತು ಉಮರ್ ಫಾರೂಕ್ ಸ್ನೇಹಿತರಾಗಿದ್ದು ಕೆಲವು ಸಮಯದಿಂದ ಇಬ್ಬರ ನಡುವೆ ವೈಮನಸು ಉಂಟಾಗಿತ್ತು ಎನ್ನಲಾಗಿದೆ.ಉಮರ್ ಫಾರೂಕ್ ಕಲ್ಲಡ್ಕದಿಂದ ಮೆಲ್ಕಾರ್ ಗೆ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸದಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ , ಎಸ್.ಐ.ಪ್ರಸನ್ನ, ಬೇಟಿ ನೀಡಿದ್ದಾರೆ.ಎರಡು ದಿನಗಳ ಹಿಂದೆಯಷ್ಠೆ ಬಂಟ್ವಾಳದ ಭಂಡಾರಿಬೆಟ್ಟಿನಲ್ಲಿ ನಟ ಸುರೇಂದ್ರ ಬಂಟ್ವಾಳ್ ನ ಕೊಲೆ ಕೃತ್ಯ ನಡೆದಿದ್ದು,ಇದಾದ ಎರಡೇ ದಿನದಲ್ಲಿ ಮತ್ತೊಬ್ಬ ರೌಡಿಶೀಟರ್ ಕೊಲೇಗೀಡಾಗಿದ್ದು,ಪೊಲೀಸರ ತಲೆ ನೋವು ತರಿಸಿದೆ.

