ಬಂಟ್ವಾಳ:  ಕಾಂಗ್ರೆಸ್ ಮುಖಂಡ, ಬಂಟ್ವಾಳ ತಾಪಂನ ಮಾಜಿ ಸದಸ್ಯ ಎಪ್ರಿಯಾಂ ಸಿಕ್ವೇರಾ ಅಮ್ಟಾಡಿ  (55) ಹೃದಯಾಘಾತಕ್ಕೊಳಗಾಗಿ  ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.IMG-20201007-WA0066

ಮೃತರು ಪತ್ನಿ,ಇಬ್ಬರು ಪುತ್ರರು , ಒರ್ವಪುತ್ರಿ ,ಸಹೋದರಿಯರು ಸಹಿತ ಬಂಧುಬಳಗವನ್ನು ಅಗಲಿದ್ದಾರೆ.  ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿರುವ ಅವರು ಈ ಹಿಂದಿನ ಅವಧಿಯಲ್ಲಿ  ಬಂಟ್ವಾಳ ತಾಲೂಕು ಪಂಚಾಯತ್ ಗೆ  ಅಮ್ಟಾಡಿಯಿಂದ ಸದಸ್ಯರಾಗಿ ಆಯ್ಕೆಯಾಗಿದ್ದರು.

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಆಗಿದ್ದರು. ಇವರ ನಿಧನಕ್ಕೆ ಮಾಜಿ ಸಚಿವ ರಮಾನಾಥ ರೈ, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ,ಪುರಸಭಾ ಸದಸ್ಯ ವಾಸುಪೂಜಾರಿ ಲೊರೆಟ್ಟೋ ಸಹಿತ ಪಕ್ಷದ ಹಲವಾರು ಪ್ರಮುಖರು ಶೋಕ ವ್ಯಕ್ತಪಡಿಸಿದ್ದಾರೆ

By suddi9

Leave a Reply

Your email address will not be published. Required fields are marked *