ಬಂಟ್ವಾಳ: ವಿಧಾನಪರಿಷತ್ತಿನ ಮಾಜಿ ಸದಸ್ಯ ಐವಾನ್ ಡಿ ಸೋಜರವರ ಅನುದಾನದ ಅಡ್ಡೂರಿನ ಜಂಕ್ಷನಲ್ಲಿ ನಿರ್ಮಿಲಾದ ಎರಡು ಲಕ್ಷ ರೂ.ವೆಚ್ಚದ ರಿಕ್ಷಾತಂಗುದಾಣ ಲೋಕಾರ್ಪಣೆಗೊಳಿಸಲಾಯಿತು.
ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜರವರು ರಿಕ್ಷಾ ತಂಗುದಾಣ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಮೊಹಿದ್ದೀನ್ ಬಾವ ಅವರು ವಹಿಸಿದ್ದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ.ಇಬ್ರಾಹಿಂ, ತಾಲೂಕುಪಂಚಾಯತ್ ಸದಸ್ಯರಾದ ಸಚಿನ್ ನಡಪ, ಸುನಿಲ್ ಪೂಜಾರಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ರುಕ್ಯಾ, ಮಾಜಿ ಸದಸ್ಯರುಗಳು, ರಿಕ್ಷಾ ಚಾಲಕರ ಸಂಘಟನೆಯ ಅಧ್ಯಕ್ಷ, ಪದಾಧಿಕಾರಿಗಳು ಉಪಸ್ಥಿತರಿದ್ದರು.ಇದೇ ವೇಳೆ ರಿಕ್ಷಾ ಚಾಲಕರಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು

