ಕೈಕಂಬ : ದೇಶದ ಜನತೆ, ಅದರಲ್ಲೂ ಮಹಿಳೆಯರು ತಲೆ ತಗ್ಗಿಸುವಂತಹ ಕೃತ್ಯ ಉತ್ತರ ಪ್ರದೇಶದಲ್ಲಿ ನಡೆದಿದೆ. ಹಿಂದೂತ್ವ ಹೆಸರಲ್ಲಿ ಮತ ಯಾಚಿಸಿರುವ ಬಿಜೆಪಿ ಸರ್ಕಾರ ಈಗ ನಾಚಿಕೆಗೇಡು ಕೆಲಸಕ್ಕೆ ಕೈಹಾಕಿದೆ. ಕೇಂದ್ರದ ಬಿಜೆಪಿ ದುರಾಡಳಿತದಿಂದ ದೇಶದಲ್ಲಿ ನಿಮಿಷಕ್ಕೆ 12 ಅತ್ಯಾಚಾರ ಘಟನೆಗಳು ನಡೆಯುತ್ತಿವೆ. ನಿನ್ನೆ ಉತ್ತರ ಪ್ರದೇಶದಲ್ಲಿ, ನಾಳೆ ನಮ್ಮ ಪರಿಸರದಲ್ಲೂ ಇಂತಹ ಹೇಯ ಕೃತ್ಯ ನಡೆಯಬಹುದು. ಒಡೆದು ಆಳುವ ನೀತಿಯಿಂದ ಮತ ಗಳಿಸಿರುವ ಬಿಜೆಪಿ ಈ ಘಟನೆಯಲ್ಲೂ ರಾಜಕೀಯ ಮಾಡುತ್ತಿದೆ. ಇಲ್ಲದಿದ್ದರೆ ಇಂತಹ ನೀಚ ಕೃತ್ಯಕ್ಕೆ ಬಿಜೆಪಿ ಪ್ರತಿಭಟನೆ ಸಲ್ಲಿಸಬೇಕಲ್ಲವೇ ? ಎಲ್ಲಿದ್ದಾರೆ ಈ ಭಾಗದ ಶಾಸಕರು ? ಹಿಂದೂ ದಲಿತ ಮಹಿಳೆ ಮೇಲಾದ ಕೃತ್ಯಕ್ಕೆ ತುಟಿ ಬಿಚ್ಚದ ನೀವೆಲ್ಲ ಮತ್ತೊಂದು ದುಷ್ಕøತ್ಯ ಎದುರು ನೋಡುತ್ತಿದ್ದೀರಾ ? ಉತ್ತರ ಪ್ರದೇಶ ಯೋಗಿ ಆದಿತ್ಯನಾಥ ಸರ್ಕಾರ ವಜಾಗೊಳಿಸಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು. ಇಂತಹ ಗುರುತರವಾದ ಜವಾಬ್ದಾರಿ ರಾಷ್ಟ್ರಪತಿಯವರಿಗಿದೆ ಎಂದು ಮಾಜಿ ಶಾಸಕ ಮೊೈದಿನ್ ಬಾವಾ ಹೇಳಿದರು.gur-oct-8-congress-2

ಉತ್ತರ ಪ್ರದೇಶದ ಹಾಥ್ರಸ್‍ನಲ್ಲಿ ಇತ್ತೀಚೆಗೆ ನಡೆದ ದಲಿತ ಮಹಿಳೆಯ ಅತ್ಯಾಚಾರ, ಕೊಲೆ ಘಟನೆ ಖಂಡಿಸಿ ಅ. 8ರಂದು ಗುರುಪುರ ಕೈಕಂಬ ಜಂಕ್ಷನ್‍ನಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ಮುಂದಾಳತ್ವದಲ್ಲಿ ನಡೆದ ಬೃಹತ್ ಕಾಂಗ್ರೆಸ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಬಾವ ಮಾತನಾಡಿದರು.ಯೋಗ್ಯತೆ ಇಲ್ಲದ ಆದಿತ್ಯನಾಥನ ಕೈಯಲ್ಲಿ ಉತ್ತರ ಪ್ರದೇಶ ಸರ್ಕಾರವಿದೆ. ಅವನೊಬ್ಬ ಕಾಮುಕ, ರಕ್ತ ಪಿಪಾಸು. ಈಗ ಎಲ್ಲಿವೆ ಹಿಂದೂ ಸಂಘಟನೆಗಳು ? ಎಲ್ಲಿದ್ದಾರೆ ಶೋಭಾ ಕರಂದ್ಲಾಜೆ ? ಸ್ಮಿತಾ ಇರಾನಿ ? ಮೌನವಾಗಿರುವ ನಿಮ್ಮ ಹೆಣ್ತನಕ್ಕೆ ಧಿಕ್ಕಾರ. ಎಲ್ಲಿದ್ದಾರೆ ಜಿಲ್ಲೆಯ ಬಿಜೆಪಿ ಶಾಸಕರು ? ಉತ್ತರ ಪ್ರದೇಶದಲ್ಲಿ ಪೊಲೀಸರು ಹೆಣ ಸುಡುವ ಕೆಲಸ ಮಾಡುತ್ತಿದ್ದಾರೆ. ದಲಿತ, ಬಡವರು ಮತ್ತು ಮಹಿಳಾ ವಿರೋಧಿ ಉತ್ತರ ಪ್ರದೇಶ ಸರ್ಕಾರ ವಜಾಗೊಳಿಸಬೇಕು. ದಲಿತ ಯುವತಿಯ ಅತ್ಯಾಚಾರ ಮತ್ತು ಸಾವು ಘಟನೆಗೆ ಕಾರಣರಾದ ರಾಕ್ಷಸರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಡಾ. ಬಿ ಆರ್ ಅಂಬೇಡ್ಕರ್ ಅನುಯಾಯಿ ದಲಿತ ಮುಖಂಡ ಶ್ರೀನಿವಾಸ್ ಗುಡುಗಿದರು.gur-oct-8-congress-1

ಯೋಗಿ ಆದಿತ್ಯನಾಥ ಆಳ್ವಿಕೆಯ ಉತ್ತರ ಪ್ರದೇಶದಲ್ಲಿ ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ. ಬಿಜೆಪಿಗರು ಈಗ ದೇಶದ ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದು, ಹಾಥ್ರಸ್ ಪೈಶಾಚಿಕ ಘಟನೆ ನಡೆದೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ದಲಿತರು, ಕಾರ್ಮಿಕ ವರ್ಗದ ಶೋಷಣೆ ಮಾಡುತ್ತಿರುವ ಕೇಂದ್ರ ಸರ್ಕಾರ, ಬಣ್ಣ ಬಣ್ಣದ ಭರವಸೆಗಳಿಗೆ ಮಾತ್ರ ಸೀಮಿತವಾಗಿದೆ. ಉತ್ತರ ಪ್ರದೇಶದಲ್ಲಿ ದಲಿತೆಯ ಮೇಲಾಗಿರುವ ರಾಕ್ಷಸೀಕೃತ್ಯದ ವಿರುದ್ಧ ಬಿಜೆಪಿಯ ಯಾವ ವ್ಯಕ್ತಿ ಮಾತನಾಡಿದ್ದಾನೆ. ಈ ಕೃತ್ಯ ಹಿಂದೂತ್ವಕ್ಕೆ ಅಪಚಾರವಲ್ಲವೇ ? ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಐವನ್ ಡಿ’ಸೋಜ ಸವಾಲೆಸೆದರು.gur-oct-8-congress-3

ಸಭೆಯಲ್ಲಿದ್ದ ಕಂದಾವರ ಗ್ರಾಪಂ ಮಾಜಿ ಅಧ್ಯಕ್ಷೆ ವಿಜಯಾ ಜಿ ಸುವರ್ಣ, ಗಂಜಿಮಠ ಗ್ರಾಪಂ ಮಾಜಿ ಅಧ್ಯಕ್ಷೆ ಮಾಲತಿ ಹಾಗೂ ಕಂದಾವರ ಗ್ರಾಪಂ ಮಾಜಿ ಸದಸ್ಯ ಶಿವಶಂಕರ್ ಉತ್ತರ ಪ್ರದೇಶ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಇಂಟಕ್‍ನ ಮಂಗಳೂರು ಉತ್ತರ ಕ್ಷೇತ್ರದ ಅಧ್ಯಕ್ಷ ಸಂಪತ್ ಲೋಬೊ, ತಾಪಂ ಸದಸ್ಯರಾದ ಸಚಿನ್ ಅಡಪ ಹಾಗೂ ಸುನಿಲ್ ಜಿ, ಗುರುಪುರ ಗ್ರಾಪಂ ಮಾಜಿ ಅಧ್ಯಕ್ಷೆ ರುಕಿಯಾ, ಮಾಜಿ ಉಪಾಧ್ಯಕ್ಷ ಜಿ ಎಂ ಉದಯ ಭಟ್, ಗಂಜಿಮಠ ಗ್ರಾಪಂ ಮಾಜಿ ಉಪಾಧ್ಯಕ್ಷ ಜಾಕಿರ್, ಪ್ರಮುಖರಾದ ಪುರುಷೋತ್ತಮ ಮಲ್ಲಿ, ವಿನಯ ಕುಮಾರ್ ಶೆಟ್ಟಿ, ನೂರ್ ಮೊಹಮ್ಮದ್, ಟಿ. ಹನೀಫ್, ಯಶವಂತ ಶೆಟ್ಟಿ, ಉಮೈ ಭಾನು, ವಿಮಲಾ, ಸೆಲಿನ್ ಫೆರ್ನಾಂಡಿಸ್, ಗಿರೀಶ್ ಆಳ್ವ, ಜಯಲಕ್ಷ್ಮೀ, ಬೂಬ, ಅಹ್ಮದ್ ಬಾವ, ಎ ಕೆ ಮುಹಮ್ಮದ್, ಹರೀಶ್ ಭಂಡಾರಿ, ಜಲೀಲ್ ಅಡ್ಡೂರು, ಮುಸ್ತಫ ಹಾಗೂ ಕಾಂಗ್ರೆಸ್ ಸಮಾನ ಮನಸ್ಕ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಗುರುಪುರ ಬ್ಲಾಕ್‍ನ ಪ್ರಧಾನ ಕಾರ್ಯದರ್ಶಿ ಬಾಷಾ ಮಾಸ್ಟರ್ ನಿರೂಪಿಸಿ, ಪ್ರಸ್ತಾವಿಕ ಮಾತನ್ನಾಡಿ ವಂದಿಸಿದರು.

ಯೋಗಿ ಸರ್ಕಾರ ವಜಾಕ್ಕೆ ಮನವಿ ಸಲ್ಲಿಕೆgur-oct-8-congress manavi-1

ಪ್ರತಿಭಟನೆ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಗುರುಪುರ-ಕೈಕಂಬ ನಾಡ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ವಜಾಗೊಳಿಸುವಂತೆ ಆಗ್ರಹಿಸಿ ರಾಷ್ಟ್ರಪತಿಯವರಿಗೆ ಬರೆಯಲಾದ ಮನವಿಯನ್ನು ಉಪ-ತಹಶೀಲ್ದಾರ್ ಶಿವಪ್ರದಾದ್ ಅವರಿಗೆ ಹಸ್ತಾಂತರಿಸಿದರು.

By suddi9

Leave a Reply

Your email address will not be published. Required fields are marked *