ಬಂಟ್ವಾಳ: ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೆ.24 ರಿಂದ ಮುಷ್ಕರ ಆರಂಭಿಸಿದ್ದು,ಸರಕಾರ ಇನ್ನೂ ಕೂಡ ಬೇಡಿಕೆಯ ಕುರಿತಾಗಿ ಗಮನಹರಿಸಿಲ್ಲ ಹೀಗಾಗಿ ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದು ತಮ್ಮ ಬೇಡಿಕೆ ಈಡೇರಿಸಲು ಪ್ರಯತ್ನಿಸುವಂತೆ ಬಂಟ್ವಾಳ ತಾಲೂಕು ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಯವರನ್ನು ಮಂಗಳವಾರ ಅವರ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.16-47-31-WhatsApp-Image-2020-09-29-at-14.13.53

ಮುಷ್ಕರದಿಂದಾಗಿ ಕೋವಿಡ್ ತಪಾಸಣೆ,ಕೋವಿಡ್ ವರದಿಗೆ ವಿಳಂಬವಾಗುತ್ತಿದೆ.ಆದೇರೀತಿ ಲಸಿಕಾ,ತಾಯಿ ಮತ್ತಮಕ್ಕಳ ಆರೋಗ್ಯ,ಕ್ಷಯರೋಗ ನಿಯಂತ್ರಣ,ಅಂಧತ್ವ ಮೊದಲಾದ ಕಾರ್ಯಕ್ರಗಳಿಗೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.ಈ ಸಂದರ್ಭದಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಡಾ.ಪ್ರಕಾಶ್ ಕುಮಾರ್ ,ಕಾರ್ಯದರ್ಶಿ ವಿಶ್ವನಾಥ್ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *