ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಲಯನ್ಸ್ ಕ್ಲಬ್ಬಿನ ವತಿಯಿಂದ ಕಲ್ಲಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಮತ್ತು ‘ಆರೋಗ್ಯವಂತ ಶಿಶು ಸ್ಪರ್ಧೆ ‘ಕಾರ್ಯಕ್ರಮವನ್ನು ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಉದ್ಘಾಟಿಸಿದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಜಿ ಮಹಮ್ಮದ್ ಹನೀಫ್, ಎ.ಆನಂದ ಶಂಭೂರು, ಬಿ.ಎಚ್.ಝಕಾರಿಯಾ, ಅಬ್ದುಲ್ ಹಮೀದ್, ಮುಖ್ಯಶಿಕ್ಷಕ ಆಶ್ರಫ್, ಗ್ರಾ.ಪಂ.ಅಧ್ಯಕ್ಷ ಸುದಂರ ಸಾಲ್ಯಾನ್, ವೈದ್ಯಾಧಿಕಾರಿ ಡಾ.ಮಂಜುನಾಥ, ಡಾ.ಸುಜಯ ಭಂಡಾರಿ ಮತ್ತಿತರರು ಇದ್ದರು.

