ಬಂಟ್ವಾಳ: ಎಸೆಸೆಲ್ಸಿ ಪರೀಕ್ಷೆಯಲ್ಲಿ  ೬೨೩ ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದು ಬಂಟ್ವಾಳ ತಾಲೂಕು ಮತ್ತು ಶಾಲೆಗೂ ಕೀರ್ತಿ ತಂದಿರುವ ಬಿ.ಮೂಡಗ್ರಾಮದ  ಮೊಡಂಕಾಪು ಇನೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅವ್ರಿಲ್ ಲೀವಾ ಲೂವಿಸ್  ಇವರನ್ನು ಬುಧವಾರ ಅಭಿನಂದಿಸಲಾಯಿತು.IMG-20200812-WA0047

ಮಾಜಿ ಸಚಿವ ರಮಾನಾಥ ರೈ ಅವರನ್ನೊಳಗೊಂಡ ನಿಯೋಗ ಮೊಡಂಕಾಪುಗಾಂದೋಡಿಯಲ್ಲಿರುವ ಆಕೆಯ ಮನೆಗೆ ತೆರಳಿ ವಿದ್ಯಾರ್ಥಿನಿ ಅವ್ರಿಲ್ ಲೀವಾ ಲೂವಿಸ್ ಳನ್ನು ಸನ್ಮಾನಿಸಿ ಶುಭ ಹಾರೈಸಿತು.

ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿಕುಂದರ್ , ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸದಾಶಿವ ಬಂಗೇರಾ , ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್ ,ಮಾಜಿ ಸಚಿವ ರೈ ಅವರ ಆಪ್ತ ಕಾರ್ಯದರ್ಶಿ ಡೆಂಜಿಲ್ ಹರ್ಮನ್ ನೊರೊನ್ಹಾ ಹಾಗೂ ಆಕೆಯ ಹೆತ್ತವರಾದ ಅವಿಲ್ ಲೂವಿಸ್ ಹಾಗೂ ಲವೀನಾ ಡಿಸೋಜ ದಂಪತಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *