ಬಂಟ್ವಾಳ:  ಬಿಜೆಪಿ‌ ಯುವಮೋರ್ಚಾ ಬಂಟ್ಟಾಳ ಇದರ ವತಿಯಿಂದ, ಸರಪಾಡಿ ಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಇಂದು ಪ್ರಭು ಶ್ರೀರಾಮಚಂದ್ರನ ಮಂದಿರಕ್ಕೆ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರೆವೇರಿಸಲಿದ್ದು ಈ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಯಾಗಲಿ ಮತ್ತು ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲೆಂದು ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ,ರಾಮಮಂದಿರ ಭೂಮಿಪೂಜೆಯ ಸಾಂಕೇತಿಕವಾಗಿ ಗಿಡ ನೇಡುವ ಮೂಲಕ ಕಾರ್ಯಕ್ರಮವನ್ನು ನಡೆಸಲಾಯಿತು.
IMG-20200805-WA0066 ಈ ಸಂದರ್ಭದಲ್ಲಿ ಸರಪಾಡಿ ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ  ಚಿದಾನಂದ ರೈ ಕಕ್ಯಪದವು, ಪ್ರಧಾನ ಕಾರ್ಯದರ್ಶಿ ಹರೀಶ್ ಪ್ರಭು,  ಪ್ರಮುಖರಾದ ದಯಾನಂದ ಶೆಟ್ಟಿ ಮುನ್ನಲಾಯಿ, ಧನಂಜಯ ಶೆಟ್ಟಿ ನಾಡಬೆಟ್ಟು,ಶಾಂತಪ್ಪ ಹಟದಟ್ಕ, ಶಶಿಕಾಂತ್ ಶೆಟ್ಟಿ ಆರುಮುಡಿ, ವಿಶ್ವನಾಥ್ ಕಾನೆಕೋಡಿ, ರವೀಂದ್ರ ಶೆಟ್ಟಿ, ರಾಜೇಂದ್ರ ಕಡಮಾಜೆ, ದೇವದಾಸ್ ನಾಯಕ್  ಹಾಗೂ 1990ರಲ್ಲಿ ನಡೆದ ಕರಸೇವೆಯಲ್ಲಿ ಪಾಲ್ಗೊಂಡಂತಹ ಜಯರಾಮ ಅಡಪ,ಹಾಗೂ ಬಂಟ್ವಾಳ ತಾಲೂಕು ಯುವಮೋರ್ಚದ ಕಾರ್ಯದರ್ಶಿಯಾದಂತಹ ನಿಶಾಂತ್ ಶೆಟ್ಟಿ ಕುಕ್ಕಿಲ, ಹಾಗೂ ಸದಸ್ಯರಾದ ರಂಜಿತ್,ಸುರೇಂದ್ರ ಹಾಗೂ ಪ್ರಮುಖ ಕಾರ್ಯಕರ್ತರಾದ ದಿನೇಶ್ ಗೌಡ, ಸುಭಾಷ್ ನಾಯಕ್, ಉಮೇಶ್ ನಾಯ್ಕ, ಅಶೋಕ್ ಗೌಡ, ಯಶೋಧರ ಗೌಡ, ಚರಣ್ ಕೋಡಿ,  ಅಶೋಕ್ ನಾಯ್ಕ, ದಿನೇಶ್ ಭಂಡಾರಿ, ಅಭಿಲಾಷ್ ಶೆಟ್ಟಿ, ಸಂದೇಶ್,ಕಿಶೋರ್ ಅಟದಡ್ಕ,  ಧನಂಜಯ ಹಂಚಿಕಟ್ಟೆ, ಸುರೇಶ್ ಬೆಂಗೆತ್ಯಾರ್ ಮುಂತಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *