ಕೈಕಂಬ:ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ನಡೆಯುವ ಐತಿಹಾಸಿಕ ಕ್ಷಣದಲ್ಲಿ ಎಡಪದವಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಹನುಮಂತನ ಮಂದಿರದ ಗರ್ಭಗುಡಿಯ ಶಿಲಾದ್ವಾರ ಪ್ರತಿಷ್ಠಾಪಿಸುವ ಕಾರ್ಯಕ್ರಮ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸರಳವಾಗಿ ನಡೆಯಿತು .
ಇದೇ ಸಂದರ್ಭದಲ್ಲಿ 1990, 1992 ರಲ್ಲಿ ಅಯೋಧ್ಯೆಗೆ ಕರಸೇವಕರಾಗಿ ತೆರಳಿದ ವಾಸು ಗೌಡ ಪಯ್ಯರಬೆಟ್ಟು, ಗಣಪತಿ ಗೌಡ ಕಣ್ಣೋರಿ, ರಘುರಾಮ ಗೌಡ, ಮಡಪಾಡಿ, ನಾಗೇಶ್ ಕೊಂಪದವು, ದಿವಂಗತ ಹಟ್ಟಿ ವಸಂತ ಗೌಡ, ಹರೀಶ್ ಕೆ. ವಿ, ಉಳ್ಳಾಲ, ಬಾಲಕೃಷ್ಣ ಮಲ್ಯ ಇವರಿಗೆ ಮಂಗಳೂರು ಉತ್ತರ ಶಾಸಕರಾದ ಭರತ್ ಶೆಟ್ಟಿ ಹಾಗೂ ಎಡಪದವು ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ಗೌಡರವರಿಂದ ವ್ಯಾಯಾಮ ಶಾಲೆಯ ವತಿಯಿಂದ ಗೌರವಿಸಲಾಯಿತು.
ವಿಜಯ ಗೌಡ ಶಿಬ್ರಿಕೆರೆ ಕಾರ್ಯಕ್ರಮ ನಿರೂಪಿಸಿದರು. ರಾಮಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ದೇವಣ್ಣ, ರಮೇಶ್ ಶಿಬ್ರಿಕೆರೆ, ಗಣಪತಿ ಶಿಬ್ರಿಕೆರೆ, ವಾಸುಗೌಡ, ವಾಮನ ಕಣ್ಣೋರಿ ಶಿವಯ್ಯ ಗೌಡ, ಸಂಘದ ಪ್ರಮುಖರಾದ ಜಗದೀಶ್ ಬಜ್ಪೆ, ಜಯ ಕೊಂಪದವುಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

