ಬಡಗಬೆಳ್ಳೂರು:ವಿಶ್ವಹಿಂದೂ ಪರಿಷತ್ ಭಜರಂಗದಳ ವೀರಕೇಸರಿ ಶಾಖೆ ಬೆಳ್ಳೂರು ಇದರ ವತಿಯಿಂದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆಯ ಶಿಲಾನ್ಯಾಸ ನಡೆದ ಸಂಧರ್ಭ ಬೆಳ್ಳೂರು ಶ್ರೀ ಕಾವೇಶ್ವರ ದೇಗುಲದಲ್ಲಿ 108 ಭಾರಿ ಶ್ರೀ ರಾಮ ತಾರಕ ಮಂತ್ರ ಜಪಿಸಲಾಯಿತು.

ಈ ಸಂದರ್ಭದಲ್ಲಿ ವಿ.ಹಿಂ.ಪ ಅಧ್ಯಕ್ಷ ಹರೀಶ್ ಕೇಪುಲಡ್ಕ ,ಸಂಚಾಲ ಸುಮಿತ್ ಧನುಪೂಜೆ ,ಸಹಸಂಚಾಲಕ ನಿತಿನ್ ವರಕೋಡಿ,ವಿ.ಹಿಂ.ಪ ಕಾರ್ಯದರ್ಶಿ ಸುನಿಲ್ ಧನುಪೂಜೆ ,ಪದಾದಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

